ಸುದ್ದಿ ಕನ್ನಡ ವಾರ್ತೆ
(Goa)ಪೊಂಡಾ :”ಗೋವಾದ ರಾಜೀವ್ ಗಾಂಧಿ ಕಲಾ ಮಂದಿರದಲ್ಲಿ ಪೊಂಡಾ ಕನ್ನಡ ಸಂಘದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಣಜಿಯ ಆದಾಯ ತೆರಿಗೆ ನಿರೀಕ್ಷಕಿ ಶ್ರೀಮತಿ ಬಿ. ಎಮ್. ಸುಮನ್ ಅವರು ಮಹಿಳಾ ಸಬಲೀಕರಣದ ಕುರಿತು ಸ್ಫೂರ್ತಿದಾಯಕವಾಗಿ ಮಾತನಾಡುತ್ತಾ, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಗಾದೆಯ ಮಹತ್ವವನ್ನು ಸಾರಿದರು. ಗೌರವಾನ್ವಿತ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಗೌರಮ್ಮ ಕೃಷ್ಣ ಬಡಿಗೇರ ಹಾಗೂ ಸಂಘದ ಹಿರಿಯ ಸದಸ್ಯೆ ಶ್ರೀಮತಿ ಸ್ನೇಹಲತಾ ಆರಿಬೆಂಚಿ ಉಪಸ್ಥಿತರಿದ್ದು, ಮಹಿಳೆಯರ ಸಾಧನೆಯನ್ನು ಶ್ಲಾಘಿಸಿದರು.
ಪಣಜಿ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಅರುಣ್ ಕುಮಾರ್ ಅವರು ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಪೊಂಡಾ ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಶೈಲೇಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸಂಘದ ಮಹಿಳಾ ಸದಸ್ಯರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಇಡೀ ಕಾರ್ಯಕ್ರಮದ ನೇರ ಪ್ರಸಾರವನ್ನು ‘ನಮ್ಮ ಸ್ಕ್ರೀನ್’ ಯುಟ್ಯೂಬ್ ಚಾನೆಲ್ ಮೂಲಕ ಬಿತ್ತರಿಸಲಾಗಿದ್ದು, ಕನ್ನಡ ನಾಡು-ನುಡಿಯ ಸಂಸ್ಕೃತಿಯನ್ನು ಪೊಂಡಾದಲ್ಲಿ ಅನಾವರಣಗೊಳಿಸಲಾಯಿತು.”
