Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ(ಮಡಗಾಂವ): ಶ್ರೀಗೋಕರ್ಣ ಶ್ರೀರಾಮಚಂದ್ರಾಪುರಮಠ ಹವ್ಯಕ ಮಹಾಮಂಡಲ ಕುಮಟಾ ವಲಯ , ಹವ್ಯಕ ವಲಯ ಗೋವಾ ಇವರ ಆಶ್ರಯದಲ್ಲಿ ಮಾರ್ಚ 1 ರಂದು ರವಿವಾರ ಗೋವಾದ ಮಡಗಾಂವ ಶ್ರೀ ಸಿದ್ಧ ದತ್ತಮಂದಿರ ದವರ್ಲಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ವಲಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದ ಅತಿಥಿಗಳಾಗಿ ಹವ್ಯಕ ಮಹಾಮಂಡಲದ ಪ್ರಾಂತ ಉಪಾಧ್ಯಕ್ಷರಾದ ಜಿ.ಎಸ್.ಹೆಗಡೆ, ಹವ್ಯಕ ಮಂಡಲದ ಕುಮಟಾ ಅಧ್ಯಕ್ಷರಾದ ಎಸ್.ವಿ.ಹೆಗಡೆ ಭದ್ರನ್, ಹವ್ಯಕ ಮಂಡಲದ ಕುಮಟಾ ಕಾರ್ಯದರ್ಶಿ ಕೃಷ್ಣಾನಂದ ಹೊಳೆಗದ್ಧೆ ಉಪಸ್ಥಿತರಿರುವರು.
ನಿವೃತ್ತ ಪ್ರಾಚಾರ್ಯರಾದ ಪರಮೇಶ್ವರ ಆರ್.ಭಟ್ ರವರಿಗೆ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಗುವುದು.

Banner Ad

ಕಾರ್ಯಕ್ರಮದಲ್ಲಿ ಪುರುಷರಿಂದ ಮಂತ್ರಘೋಷ, ಮಾತೆಯರಿಂದ ಕುಂಕುಮಾರ್ಚನೆ, ಶ್ರೀ ಗುರುಪಾದುಕಾ ಸ್ತೋತ್ರ ಸಾಮೂಹಿಕ ಪಠನೆ, ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹವ್ಯಕ ವಲಯ ಗೋವಾ ಅಧ್ಯಕ್ಷರಾದ ಮಹಾಬಲ ಭಟ್ ಹಾಗೂ ಕಾರ್ಯದರ್ಶಿ ಶ್ರೀಪಾದ ರಾವ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Banner Ad