ಸುದ್ದಿ ಕನ್ನಡ ವಾರ್ತೆ
Goa ಮಡಗಾಂವ್ :ಹವ್ಯಕ ಮಹಾಮಂಡಲದ ಗೋವಾ ವಲಯದ ಆಶ್ರಯದಲ್ಲಿ ನವೆಂಬರ್ 16 ರವಿವಾರ ಮಡಗಾಂವ್ ನಗರದ ಹರಿಮಂದಿರದಲ್ಲಿ ಕಾರ್ತಿಕ ಮಾಸದ ನಿಮಿತ್ತ ದೀಪಾರಾಧನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮಧ್ಯಾಹ್ನ 3.30 ಕ್ಕೆ ಮಾತೆಯರು ಕುಂಕುಮಾರ್ಚನೆ ನಡೆಸಲಿದ್ದಾರೆ. ಸಂಜೆ 6.30 ಕ್ಕೆ ದೇವಾಲಯದ ಆವಾರದಲ್ಲಿ ಹಣತೆಯ ದೀಪಗಳನ್ನು ಹಚ್ಚುವ ಮೂಲಕ ದೀಪಾರಾಧನೆಯನ್ನು ನಡೆಸಲಾಗುವುದು. ತದನಂತರ ದೇವರ ಸನ್ನಿಧಿಯಲ್ಲಿ ಅಷ್ಟಾವಧಾನ ಸೇವೆ ನಡೆಯಲಿದೆ.
ವಾರ್ಷಿಕವಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಶ್ರದ್ಧಾ ಭಕ್ತಿಯಿಂದ ಪಾಲ್ಗೊಳ್ಳಬೇಕೆಂದು ವಲಯದ ಅಧ್ಯಕ್ಷ ಮಹಾಬಲ ಭಟ್ಟ ಅವರು ವಿನಂತಿಸಿಕೊಂಡಿದ್ದಾರೆ.
