ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಸೋಮವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಪ್ರವಾಸಿಗರು ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಪಣಜಿ ಎಡೆಗೆ ಬರುತ್ತಿದ್ದ ಟ್ಯಾಂಕರ್ ಹಾಗೂ ಪಣಜಿಯಿಂದ ಮಡಗಾಂವ ಗೆ ತೆರಳುತ್ತಿದ್ದ ರೆಂಟ್ ಅ ಕಾರ್ ಗೆ ಪಣಜಿ ಸಮೀಪದ ಬಾಂಬೋಲಿಂ ಇಳಿಜಾರು ರಸ್ತೆಯಲ್ಲಿ ಡಿಕ್ಕಿ ಹೊಡೆದು ಕಾರು ನುಚ್ಚುನೂರಾಗಿದೆ.

ಲಭ್ಯವಾದ ಮಾಹಿತಿಯ ಅನುಸಾರ-ಸೋಮವಾರ ಮಧ್ಯರಾತ್ರಿಯ ವೇಳೆಗೆ ಬಾಂಬೋಲಿಂ ಬಳಿ ಈ ಅಪಘಾತ ಸಂಭವಿಸಿದೆ. ಪಣಜಿ ಭಾಗಕ್ಕೆ ತೆರಳುತ್ತಿದ್ದ ಟ್ಯಾಂಕರ್ ಡಿವೈಡರ್ ಗೆ ಡಿಕ್ಕಿ ಹೊಡೆದು ನಂತರ ಪಣಜಿಯಿಂದ ಮಡಗಾಂವ ಬದಿಗೆ ತೆರಳುತ್ತಿದ್ದ ರೆಂಟ್ ಅ ಕಾರಿಗೆ ಡಿಕ್ಕಿಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಯೋಗೇಂದರ ಸಿಂಗ್ (52, ದೆಹಲಿ) ಹಾಗೂ ಮತ್ತೋರ್ವ ಪ್ರವಾಸಿಗ ಸಾವನ್ನಪ್ಪಪಿದ್ದಾರೆ.

ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಾಂಬೋಲಿಂ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಟ್ಯಾಂಕರ್ ಚಾಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ . ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.