ಸುದ್ಧಿಕನ್ನಡ ವಾರ್ತೆ
ಪಣಜಿ: ದಕ್ಷಿಣ ಗೋವಾದ ಕೋಲ್ವಾ ಬೀಚ್ ಸಮೀಪ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕರ್ನಾಟಕದ ಉತ್ತರಕನ್ನಡ ಮೂಲದ ವ್ಯಕ್ತಿ ತನ್ನ ಮನೆಯ ಮುಂಭಾಗವೇ ಮೃತ ಅವಸ್ಥೆಯಲ್ಲಿ ಪತ್ತೆಯಾಗಿದ್ದಾನೆ. ಸದ್ಯ ಗುಡುಗು ಮಳೆಯಾಗುತ್ತಿರುವುದರಿಂದ ಸಿಡಿಲು ಬಡಿದು ಈತ ಸಾವನ್ನಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.
ಗೋವಾದ ಮಡಗಾಂವ ಸಮೀಪದ ಕೋಲ್ವಾದಲ್ಲಿ 38 ವರ್ಷದ ಕರ್ನಾಟಕದ ಉತ್ತರ ಕನ್ನಡ ಮೂಲದ ವ್ಯಕ್ತಿ ಗುರುವಾರ ಸಂಜೆ ತನ್ನ ಮನೆಯ ಮುಂಭಾಗವೇ ಮೃತ ಅವಸ್ಥೆಯಲ್ಲಿ ಪತ್ತೆಯಾಗಿದ್ದಾನೆ. ಪೋಲಿಸರು ಈ ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಮೃತದೇಹದ ಪಂಚನಾಮೆ ನಡೆಸಿ ಪೋಲಿಸರು ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ ಈತ ಮೃತ ಆಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.
ಈ ವೈಕ್ತಿಯ ಮರಣೋತ್ತರ ಪರೀಕ್ಷಯಲ್ಲಿ ಈತ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾನೆ ಎಂದು ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೋಲಿಸರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗುರುವಾರ ಸಂಜೆ ಮಡಗಾಂವ ಭಾಗದಲ್ಲಿ ಗಾಳಿ, ಮಳೆ, ಗುಡುಗು ಸಿಡಿಲು ಉಂಟಾಗಿತ್ತು. ಅಂದು ಈ ವ್ಯಕ್ತಿಯ ಮೇಲೆ ಸಿಡಿಲು ಬಿದ್ದಿರಬಹುದು ಎಂದು ಶಂಕಿಸಲಾಗಿದೆ.
