ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಕುಂಕಳ್ಳಿಯ ಪವರ್ ಹೌಸ್ ಬಳಿಯ ರೈಲ್ವೆ ಹಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ದಿಲೀಪ್ ಡಿಗ್ಗ (ವಯಸ್ಸು 28, ಛತ್ತೀಸ್‍ಗಢ ನಿವಾಸಿ) ಸಾವನ್ನಪ್ಪಿದ್ದಾರೆ. ಸುಸ್ತಾಗಿದ್ದ ಪತ್ನಿಯನ್ನು ರಸ್ತೆಯಲ್ಲಿ ಕೂರಿಸಲು ಪ್ರಯತ್ನಿಸುತ್ತಿದ್ದಾಗ, ಕುಡಿದ ಅಮಲಿನಲ್ಲಿದ್ದ ದಿಲೀಪ್, ಬರುತ್ತಿದ್ದ ರೈಲನ್ನು ನಿರೀಕ್ಷಿಸದೆ ಡಿಕ್ಕಿ ಹೊಡೆದಿದ್ದಾರೆ. ಈ ಅಪಘಾತದಲ್ಲಿ ದಿಲೀಪ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

 

ದಿಲೀಪ್ ಡಿಗ್ಗಾ ಮತ್ತು ನಿಲಿ ಆಂಚಲ್ ಕಾಜರ್ ಮೂಲತಃ ಛತ್ತೀಸ್‍ಗಢದವರಾಗಿದ್ದು, ಕೆಲಸಕ್ಕಾಗಿ ಗೋವಾದ ಕುಂಕಳ್ಳಿಯ ಪ್ರದೇಶದಲ್ಲಿ ವಾಸಿಸುತ್ತಿದ್ದರು. ದಿಲೀಪ್ ಮತ್ತು ನಿಲಿ ಇಬ್ಬರೂ ಮದ್ಯ ಸೇವಿಸಿದ್ದರು. ನಂತರ, ಅವರು ರೈಲ್ವೆ ಹಳಿಯಲ್ಲಿ ನಡೆದುಕೊಂಡು ಊಟಕ್ಕೆ ಹೋಗುತ್ತಿದ್ದರು. ಅವರ ಪತ್ನಿ ನಿಲಿ ಆಂಚಲ್ ಕಾಜರ್ ದಣಿದಿದ್ದರಿಂದ, ಅವರು ದಿಲೀಪ್ ಅವರನ್ನು ಕುಳಿತುಕೊಳ್ಳಲು ಸಹಾಯ ಮಾಡುವಂತೆ ಕೇಳಿಕೊಂಡರು. ಪತ್ನಿಯನ್ನು ಕೂರಿಸಲು ಸಹಾಯ ಮಾಡುವಾಗ, ಕುಡಿದಿದ್ದ ದಿಲೀಪ್ ವೇಗವಾಗಿ ಚಲಿಸುವ ರೈಲನ್ನು ನಿರೀಕ್ಷಿಸಿರಲಿಲ್ಲ. ರೈಲು ದಿಲೀಪ್‍ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ದಕ್ಷಿಣ ಗೋವಾ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಕೊಂಕಣ ರೈಲ್ವೆ ಪೆÇಲೀಸರು ಈ ಪ್ರಕರಣವನ್ನು ಅಸ್ವಾಭಾವಿಕ ಸಾವು ಎಂದು ದಾಖಲಿಸಿದ್ದಾರೆ. ಪೆÇಲೀಸ್ ಸಬ್-ಇನ್ಸ್‍ಪೆಕ್ಟರ್ ಪ್ರಜ್ಞಾ ಜೋಶಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.