ಸುದ್ಧಿಕನ್ನಡ ವಾರ್ತೆ
ಮಳೆಗಾಲದ ಸಂದರ್ಭದಲ್ಲಿ ಗೋವಾಕ್ಕೆ ಪ್ರವಾಸ ಕೈಗೊಳ್ಳುವವರಿದ್ದರೆ ಎಚ್ಚರ… ಹೌದು ಗೋವಾದಲ್ಲಿ ಹಲವು ಜಲಮೂಲಗಳಿಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಗೋವಾದಲ್ಲಿ ಹಲವು ಜಲಪಾಲ ಮತ್ತು ಜಲಮೂಲಗಳಿಗೆ ಮಳೆಗಾದ ಸಂದರ್ಭದಲ್ಲಿ ನಿರ್ಬಂಧ ಹೇರಲಾಗಿದೆ. ನಿರ್ಬಂಧ ಹೇರಿರುವ ಪ್ರವಾಸಿ ತಾಣಗಳಿಗೆ ಪ್ರವೇಶಿಸುವ ಪ್ರವಾಸಿಗರ ವಿರುದ್ಧ ಕ್ರಮ ಜಕೈಗೊಳ್ಳುವಂತೆ ಇದೀಗ ದಕ್ಷಿಣ ಗೋವಾ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಗೋವಾದಲ್ಲಿ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ಸೇರಿದಂತೆ ಹಲವು ಅಪಾಯಕಾರಿ ಜಲಮೂಲಗಳಿಗೆ ಮಳೆಗಾಲದ ಸಂದರ್ಭದಲ್ಲಿ ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಗೋವಾಕ್ಕೆ ಮಳೆಗಾಲದ ಸಂದರ್ಭದಲ್ಲಿ ಬರುವ ಪ್ರವಾಸಿಗರು ನಿರ್ಬಂಧಿತ ಜಲಮೂಲಗಳಿಗೆ ತೆರಳಿದರೆ ಕಠಿಣ ಕ್ರಮಕ್ಕೆ ಗುರಿಯಾಗಲಿದ್ದೀರಿ.

 

ದಕ್ಷಿಣ ಗೋವಾ ಜಿಲ್ಲಾಧಿಕಾರಿ ಎಗ್ನಾ ಕ್ಲೀಟಸ್ ರವರು ಜಿಲ್ಲೆಯ ಕಾನೂನು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಸಭೆಯಲ್ಲಿ, ಜಲಪಾತಗಳು ಮತ್ತು ನಿರ್ಬಂಧ ಹೇರಿರುವ ಜಲಮೂಲ ಪ್ರದೇಶಗಳಿಗೆ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಪೆÇಲೀಸ್ ಮತ್ತು ಶಾನಭೋಗರಿಗೆ ಆದೇಶಿಸಿದರು.

 

ವಾಸ್ಕೋದಲ್ಲಿ ಶ್ರೀ ದೇವ ದಾಮ್ ಬಾಬಾ ಸಪ್ತಾಹ, ಸ್ವಾತಂತ್ರ್ಯ ದಿನಾಚರಣೆ ಮತ್ತು ಇತರ ಕಾನೂನು ಸುವ್ಯವಸ್ಥೆ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ದಕ್ಷಿಣ ಗೋವಾದ ಪ್ರವಾಸಿ ಆಕರ್ಷಣೆಗಳಾಗಿರುವ ಜಲಪಾತಗಳು ಮತ್ತು ಜಲಮೂಲಗಳಲ್ಲಿ ನಾಗರಿಕರು ಮತ್ತು ಪ್ರವಾಸಿಗರ ಜನಸಂದಣಿ ಹೆಚ್ಚುತ್ತಿರುವ ಕಾರಣ ಹಾಗೂ ಅಪಘಾತಗಳ ಘಟನೆಗಳಿಂದಾಗಿ, ಆಡಳಿತವು ಈಗಾಗಲೇ ಪ್ರವೇಶವನ್ನು ನಿಷೇಧಿಸುವ ಆದೇಶಗಳನ್ನು ವಿಧಿಸಿದೆ. ಈ ಸ್ಥಳಗಳಲ್ಲಿ, ವಿಶೇಷವಾಗಿ ಶನಿವಾರ ಮತ್ತು ಭಾನುವಾರದಂದು ಗಸ್ತು ಹೆಚ್ಚಿಸುವಂತೆ ಪೆÇಲೀಸರಿಗೆ ಸೂಚಿಸಲಾಗಿದೆ. ಆದೇಶಗಳನ್ನು ಉಲ್ಲಂಘಿಸಿದವರ ವಿರುದ್ಧ ಪೆÇಲೀಸರು ಇಲ್ಲಿಯವರೆಗೆ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಲೀಟಸ್ ಮಾಹಿತಿ ನೀಡಿದರು.