ಸುದ್ದಿಕನ್ನಡ ವಾರ್ತೆ
ಪಣಜಿ: ಭಾರತದಲ್ಲಿ ಪ್ರಾದೇಶಿಕ ವಾಯು ಸಂಪರ್ಕವನ್ನು ವಿಸ್ತರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಗೋವಾ ಮೂಲದ ವಿಮಾನಯಾನ ಸಂಸ್ಥೆ ಫ್ಲೈ91, ಸೋಲಾಪುರ ಮತ್ತು ಗೋವಾ ನಡುವೆ ತನ್ನ ಹೊಸ ವಿಮಾನ ಹಾರಾಟವನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

ಫ್ಲೈ91 ನ ಉದ್ಘಾಟನಾ ವಿಮಾನವನ್ನು ಸೋಲಾಪುರ ವಿಮಾನ ನಿಲ್ದಾಣದಲ್ಲಿ ಉತ್ಸಾಹದಿಂದ ಸ್ವಾಗತಿಸಲಾಯಿತು. ಇದರೊಂದಿಗೆ, ಫ್ಲೈ91 ಮಹಾರಾಷ್ಟ್ರದ ಪ್ರಮುಖ ಸಾಂಸ್ಕøತಿಕ ಮತ್ತು ಕೈಗಾರಿಕಾ ಕೇಂದ್ರವೆಂದು ಕರೆಯಲ್ಪಡುವ ಸೋಲಾಪುರದಲ್ಲಿ ತನ್ನ ಸೇವೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸಿದೆ.
ಸೋಲಾಪುರದಿಂದ ಗೋವಾಕ್ಕೆ ಉದ್ಘಾಟನಾ ವಿಮಾನ ಹಾರಾಟವನ್ನು ನಾಗರಿಕ ವಿಮಾನಯಾನ ಮತ್ತು ಸಹಕಾರ ರಾಜ್ಯ ಸಚಿವ ಮುರಳೀಧರ್ ಮೊಹಲ್ ಔಪಚಾರಿಕವಾಗಿ ಹಸಿರು ನಿಶಾನೆ ತೋರಿದರು. ಸೋಲಾಪುರದ ಉಸ್ತುವಾರಿ ಸಚಿವ ಜಯಕುಮಾರ್ ಗೋರ್, ಸ್ಥಳೀಯ ಶಾಸಕರು, ಸೋಲಾಪುರ ಜಿಲ್ಲಾಡಳಿತದ ಅಧಿಕಾರಿಗಳು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಫ್ಲೈ91 ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

“ಗೋವಾದಿಂದ ಫ್ಲೈ91 ನ ಉದ್ಘಾಟನಾ ವಿಮಾನ ಆಗಮನದೊಂದಿಗೆ ಸೋಲಾಪುರವು ಈಗ ಭಾರತದ ವಾಯುಯಾನ ನಕ್ಷೆಯಲ್ಲಿ ಸ್ಥಾನ ಪಡೆದಿದೆ. ಈ ವಿಮಾನ ಸೇವೆಯು ಸೋಲಾಪುರಕ್ಕೆ ಬರುವ ಪ್ರಯಾಣಿಕರ ಪ್ರಯಾಣವನ್ನು ಸುಲಭಗೊಳಿಸುತ್ತದೆ” ಎಂದು ಮೊಹಲ್ ಫ್ಲೈ91 ನ ಉದ್ಘಾಟನಾ ವಿಮಾನ ಗೋವಾಕ್ಕೆ ಮುನ್ನ ಸೋಲಾಪುರ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಹೇಳಿದರು.

ಗೋವಾ-ಸೋಲಾಪುರ-ಗೋವಾ ವಿಮಾನವು ವಾರದಲ್ಲಿ ನಾಲ್ಕು ದಿನಗಳು (ಸೋಮವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ಉಲ್ಲೇಖಿಸಿರುವ ನಿಗದಿತ ಸಮಯದ ಪ್ರಕಾರ ಕಾರ್ಯನಿರ್ವಹಿಸಲಿದೆ.