ಸುದ್ಧಿಕನ್ನಡ ವಾತೇ
Goa: ಗೋವಾದಲ್ಲಿನ ಮಂದಿರ ವ್ಯವಸ್ಥಾಪನಾ ಸಮೀತಿಯನ್ನು ಆಯ್ಕೆ ಮಾಡಲು ಫೆಬ್ರುವರಿ 9 ರಂದು ಚುನಾವಣೆ ನಡೆಯಲಿದ್ದು, ಕೆಲವು ದೇವಸ್ಥಾನಗಳು ಈ ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೆಲವರು ತಹಶೀಲ್ದಾರ ಬಳಿ ದೂರು ಸಲ್ಲಿಸಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ಭಾನುವಾರ ನಡೆಯಲಿರುವ ಚುನಾವಣೆಯಲ್ಲಿ ಗೊಂದಲ ಸೃಷ್ಠಿಯಾಗುವ ಸಾಧ್ಯತೆಯಿದೆ ಎಂದೇ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇಚ್ಚುಕ ಉಮೇದುವಾರರು ಈಗಾಗಲೇ ಈಕುರಿತು ಲಾಬಿ ಮಾಡುತ್ತಿದ್ದಾರೆ.
ಜಾಂಬಾವಲಿ ಶ್ರೀ ರಾಮನಾಥ ದಾಮೋದರ ದೇವಸ್ಥಾನದಲ್ಲಿ ಈ ಚುನಾವಣೆಯ ವಾದ ಮುಂಬಯಿ ಉಚ್ಛನ್ಯಾಯಾಲಯದ ವರೆಗೆ ತಲುಪಿದೆ. ಈ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಹೊಂದಿರುವ ದೇಸ್ಥಾನದ ಮಹಾಜನರ ಹೆಸರು ಮತದಾರರ ಪಟ್ಟಿಯಲ್ಲಿ ಕಾಣೆಯಾಗಿದೆ ಎಂದು ದೇವಸ್ಥಾನದ ಮಹಾಜನ ಓಂಕಾರ ಕಾಮತ್ ಸಾಂಬಾರಿ ರವರು ಉಚ್ಛ ನ್ಯಾಯಾಲಯದಲ್ಲಿ ಯಾಚಿಕೆ ಸಲ್ಲಿಸಿದ್ದರು.
ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆದು – ಹಿಂದಿನ ಚುನಾವಣೆಯಲ್ಲಿ ಯಾವ ಮತದಾರರ ಪಟ್ಟಿಯಿತ್ತೊ ಅದರಂತೆಯೇ ಮತದಾನ ಮಾಡುವ ಹಕ್ಕು ಆ ಎಲ್ಲ ಮಹಾಜನರಿಗೂ ಇದೆ ಎಂದು ನ್ಯಾಯಾಲಯವು ತೀರ್ಪು ನೀಡಿದೆ. ಇದರಿಂದಾಗಿ ಸದ್ಯಕ್ಕೆ ಈ ಗೊಂದಲ್ಲೆ ತೆರೆ ಬಿದ್ದಂತಾಗಿದೆ. ಆದರೆ ಈ ಚುನಾವಣೆಗೆ ತುರುಸಿನ ಸ್ಫರ್ಧೆ ಏರ್ಪಟ್ಟಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.