ಸುದ್ಧಿಕನ್ನಡ ವಾರ್ತೆ
Goa : ಕೇಂದ್ರ ಅರ್ಥ ಮಂತ್ರಿ ನಿರ್ಮಲಾ ಸೀತಾರಾಮನ್ ರವರು ಪ್ರಸಕ್ತ ಕೇಂದ್ರ ಬಜೇಟ್ ನಲ್ಲಿ ವೈದ್ಯಕೀಯ ಸೀಟುಗಳಲ್ಲಿ (MBBS) ಹೆಚ್ಚಳ ಮಾಡುವ ಘೋಷಣೆ ಮಾಡಿದ್ದಾರೆ, ಇದರಿಂದಾಗಿ ಗೋವಾ ರಾಜ್ಯಕ್ಕೂ ಲಾಭವಾಗಲಿದೆ ಎಂದು ಗೋವಾ ರಾಜ್ಯ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ ಹೇಳಿದ್ದಾರೆ. ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರವರು ಮುಂದಿನ ವರ್ಷ 10,000 ವೈದ್ಯಕೀಯ ಸೀಟುಗಳ (MBBS) ಹೆಚ್ಚಳ ಮಾಡುವ ಘೋಷಣೆ ಮಾಡಿದ್ದಾರೆ. ಇದು ಮುಂದಿನ 5 ವರ್ಷಗಳಲ್ಲಿ 75,000 ವರೆಗೂ ಹೆಚ್ಚಳವಾಗಲಿದೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ನುಡಿದರು,
ಕೇಂದ್ರ ಬಜೇಟ್ ನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಮುಂದಿನ 5 ವರ್ಷಗಳಲ್ಲಿ 75,000 ವೈದ್ಯಕೀಯ ಸೀಟುಗಳಿಗೆ ಮಂಜೂರಿ ನೀಡಲಾಗುವುದು ಎಂದು ಹೇಳುವ ಮೂಲಕ ಕೇಂದ್ರ ಅರ್ಥ ಮಂತ್ರಿಗಳು ವೈದ್ಯಕೀಯ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಘೋಷಣೆ ಮಾಡಿದ್ದಾರೆ. ಗೋವಾ ರಾಜ್ಯಕ್ಕೂ ಇದರಿಂದ ಹೆಚ್ಚಿನ ಲಾಭವಾಗಲಿದ್ದು, ರಾಜ್ಯದಲ್ಲಿ ಎಂಬಿಬಿಎಸ್ ಗಾಗಿ 100 ಸೀಟುಗಳ ಅಪೇಕ್ಷೆಯಿದೆ ಎಂದು ಸಚಿವ ರಾಣೆ ಮಾಹಿತಿ ನೀಡಿದರು.