ಸುದ್ಧಿಕನ್ನಡ ವಾರ್ತೆ
Goa: ಗೋವಾದ ಪ್ರಸಿದ್ಧ ಕಲಂಗುಟ್ ನಲ್ಲಿ ಆತಂಕಕಾರಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಈ ಘಟನೆಯಲ್ಲಿ ಗೋವಾದಲ್ಲಿ ಪ್ರವಾಸಿಯೋರ್ವ ಗಂಭೀವಾಗಿ ಗಾಯಗೊಂಡಿದ್ದಾರೆ. ಕಲಂಗುಟ್ ನಲ್ಲಿರುವ ಪ್ಲಾನೆಟ್ ಗೋವಾ ಶಾಕ್ಸಗೆ ಮುಂಬಯಿಯಿಂದ ಬಂದಿದ್ದ ಪ್ರವಾಸಿಗನ ಮೇಲೆ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ಶಾಕ್ಸ ಕಾರ್ಮಿಕರು ಮತ್ತು ಪ್ರವಾಸಿ ನಡುವೆ ನಡೆದ ಜಗಳದಲ್ಲಿ ಪ್ರವಾಸಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪಂಚ ಸದಸ್ಯ ಸೇರಿದಂತೆ 5 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಆತಂಕಕಾರಿ ವಿಷಯವೆಂದರೆ ಕಳೆದ ಸಪ್ಟೆಂಬರ್ ನಲ್ಲಿ ಇದೇ ಶಾಕ್ಸ ನಲ್ಲಿ ಗುಜರಾತ್ ಪೋಲಿಸ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿತ್ತು. ಇದೀಗ ನಡೆದ ಘಟನೆಯಲ್ಲಿ ನೌಪಾಲ ಪಿ.ಟಿ(28, ಕೇರಳ), ರೋಹಿತ್ ಕುಮಾರ್ (27), ಅಭಿಷೇಕ ಕುಮಾರ್ ( 24), ವಿನೋದ ಕುಮಾರ್ (31), ಸುದೀರ ಕುಮಾರ್ (28), ಈ ನಾಲ್ವರೂ ಹಿಮಾಚಲಪ್ರದೇಶದವರಾಗಿದ್ದಾರೆ. ಇವರೆಲ್ಲರನ್ನೂ ಪೋಲಿಸರು ಬಂಧಿಸಿದ್ದಾರೆ.
ಕಳೆದ ಕೆಲ ತಿಂಗಳಿಂದ ಗೋವಾದ ಕಲಂಗುಟ್ ಬೀಚ್ ಪರಿಸರದಲ್ಲಿ ಪ್ರವಾಸಿಗರ ಮೇಲೆ ಹಲ್ಲೆ ನಡೆಯುತ್ತಿರುವ ಘಟನೆ ಮರುಕಳಿಸುತ್ತಿದೆ, ಇದೀಗ ಮತ್ತೆ ಇಂತಹದ್ದೇ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
===
Suddikannada news
Goa: An alarming incident has been reported in Goa’s famous Calangute. A tourist was seriously injured in this incident in Goa. At the Planet Goa Shaksa in Calangute, a tourist from Mumbai was seriously injured in a scuffle between Shaksa workers and a tourist at 3 am on Friday morning.
In connection with this incident, the police have arrested 5 people including local panch members. The alarming thing is that last September there was an attack on the Gujarat Police in the same Shaks. In the recent incident Naupal PT (28, Kerala), Rohit Kumar (27), Abhishek Kumar (24), Vinod Kumar (31), Sudira Kumar (28), all these four are from Himachal Pradesh. All of them have been arrested by the police.
For the past few months, the incident of attacks on tourists in the Calangute beach environment of Goa has been recurring, now again such an incident has caused concern.