ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಕೆಲವು ವರ್ಷಗಳಿಂದ ಗೋವಾದ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರದಿಂದ ಅಗತ್ಯ ಹಣ ನೀಡಲಾಗುತ್ತಿದೆ. ಕೇಂದ್ರದ ನೆರವಿನಿಂದ ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಮತ್ತು ಯೋಜನೆಗಳು ನಡೆಯುತ್ತಿವೆ. ಮಡಗಾಂವ್ ಬೈಪಾಸ್ ನಿಂದ ಕುಂಕಳ್ಳಿವರೆಗಿನ 7.25 ಕಿ.ಮೀ ರಸ್ತೆಗೆ ಕೇಂದ್ರದಿಂದ 747 ಕೋಟಿ ಮಂಜೂರಾಗಿತ್ತು. ಇದು 4.45 ಕಿಮೀ ಉದ್ದದ ಆರು ಹಂತದ ಮೇಲ್ಸೇತುವೆಯನ್ನೂ ಒಳಗೊಂಡಿರುತ್ತದೆ, ಈ ಕುರಿತಂತೆ ಸಂಸದ ಸದಾನಂದ ಶೇಟ್ ತನವಾಡೆ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕಂಕೋನ್ ಬೈಪಾಸ್ ಮೂಲಕ ಬೆಂದೋರ್ಡೆಯಿಂದ ಪೋಳೆ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ 22. 10 ಕಿ.ಮೀ ಉದ್ದದ ಚತುಷ್ಪಥ ರಸ್ತೆಗೆ ಕೇಂದ್ರವು 1,376 ಕೋಟಿ ರೂ. ಮಂಜೂರು ಮಾಡಿದೆ. ಈ ರಸ್ತೆಯ ಚತುಷ್ಪಥವು ಕಾಣಕೋಣ-ಕುಂಕಳ್ಳಿ ಮತ್ತು ಮಾಗಾರ್ಂವ್ ಮಾರ್ಗಗಳ ಸಂಪರ್ಕವನ್ನು ಸುಧಾರಿಸುತ್ತದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಸಾರ್ವಜನಿಕಗೊಳಿಸಿದ್ದಾರೆ. ಬೆಂದೋರ್ಡೆ, ಕೋರ್ಡೆ, ಬಾರ್ಶೆ ಭಾಗದ ಜನರಿಗೆ ಚತುಷ್ಪಥ ಕಾಮಗಾರಿಯಿಂದ ಅನುಕೂಲವಾಗಲಿದೆ. ಇದರಿಂದ ಈ ಭಾಗದ ಜನರು ಕುಂಕಳ್ಳಿ ಅಥವಾ ಮಾಗಾರ್ಂವ್‍ಗೆ ವೇಗವಾಗಿ ತಲುಪಬಹುದು.
ಪ್ರಸ್ತುತ ಕಾಣಕೋಣದಿಂದ ಮಾಗಾರ್ಂವ್ ಅಥವಾ ಕುಂಕಳ್ಳಿಗೆ ಪ್ರಯಾಣಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ರಸ್ತೆ ನಿರ್ಮಾಣದ ನಂತರ ಕಂಕೋಣದಿಂದ ಕುಂಕಳ್ಳಿ ಅಥವಾ ಕಾಣಕೋಣ – ಮಾಗಾರ್ಂವ್ ಕಡೆಗೆ ಹೋಗುವ ಸಂಚಾರ ಸುಗಮವಾಗಿರುತ್ತದೆ. ಮಾಗಾರ್ಂವ್‍ನಿಂದ ಕಾರವಾರ ಮಾರ್ಗವಾಗಿ ಪ್ರತಿದಿನ ಹೆಚ್ಚಿನ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಕೆಲವರು ಕಾರವಾರದಿಂದ ಗೋವಾ ಮೂಲಕ ಮಹಾರಾಷ್ಟ್ರಕ್ಕೂ ಹೋಗುತ್ತಾರೆ. ಇವರೆಲ್ಲರಿಗೂ ಈ ಚತುಷ್ಪಥದಿಂದ ಲಾಭವಾಗಲಿದೆ. ಈ ಯೋಜನೆಯು ಕಾಣಕೋಣ ತಾಲೂಕನ್ನು ಸಂಪೂರ್ಣ ದಕ್ಷಿಣ ಗೋವಾಕ್ಕೆ ಸಂಪರ್ಕಿಸಲು ಪೂರಕವಾಗಲಿದೆ ಎಂದು ಕೇಂದ್ರ ಸಚಿವ ಗಡ್ಕರಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.