ಸುದ್ಧಿಕನ್ನಡ ವಾರ್ತೆ
Goa: ಓಲ್ಡ ಗೋವಾದಲ್ಲಿ ತೂಕ ಮತ್ತು ಅಳತೆ ಇಲಾಖೆಯ ಅಧಿಕಾರಿಗಳು ಸಿಲಿಂಡರ್ ತುಂಬಿದ್ದ ಮೂರು ಟ್ರಕ್ ತಪಾಸಣೆ ನಡೆಸಿದಾಗ ಎಚ್ ಪಿ ಸಿ ಎಲ್ ಕಂಪನಿಯ ಕಡಿಮೆ ತೂಕ ಹೊಂದಿರುವ 18 ಗೃಹ ಬಳಕೆಯ ಸಿಲಿಂಡರ್ ಪತ್ತೆಯಾಗಿದೆ. ಈ ಸಿಲಿಂಡರ್‍ಗಳನ್ನು ಇಲಾಖೆ ವಷಪಡಿಸಿಕೊಂಡಿದೆ.
ಓಲ್ಡಗೋವಾ ಪರಿಸರದಲ್ಲಿ ಗೃಹ ಬಳಕೆಯ ಗ್ರಾಸ್ ಸಿಲಿಂಡರ್ ಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಇಲಾಖೆಗೆ ಲಭ್ಯವಾಗಿತ್ತು. ಈ ಮಾಹಿತಿಯ ಹಿನ್ನೆಲೆಯಲ್ಲಿ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ತಂಡ ಧಾಳಿ ನಡೆಸಿ ತಪಾಸಣೆಗೆ ಒಳಪಡಿಸಿದಾಗ ಅಲ್ಲಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಮೂರು ಲಾರಿ ನಿಂತಿತ್ತು. ಅಧಿಕಾರಿಗಳು ಈ ಸಿಲಿಂಡರ್ ಪರಿಶೀಲನೆ ನಡೆಸಿದಾಗ 18 ಗೃಹ ಬಳಕೆಯ ಸಿಲಿಂಡರ್ ಗಳು ಕಡಿಮೆ ತೂಕದ್ದಾಗಿರುವುದು ಅಧಿಕಾರಿಗಳ ತಂಡ ಪತ್ತೆಮಾಡಿದೆ. ವಷಪಡಿಸಿಕೊಂಡ ಸಿಲಿಂಡರ್ 1.4 ಕೆಜಿ ಕಡಿಮೆ ತೂಕ ಹೊಂದಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ಗ್ಯಾಸ್ ಸಿಲಿಂಡರ್ ಗಳನ್ನು ಅಧಿಕಾರಿಗಳ ತಂಡ ವಷಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಕೈಗೆತ್ತಿಕೊಂಡಿದೆ.
ಕಡಿಮೆ ತೂಕದ ಗ್ಯಾಸ್ ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ಗ್ರಾಹಕರು ಎಚ್ಚರ ವಹಿಸಬೇಕು ಗ್ರಾಹಕರು ಸಿಲಿಂಡರ್ ಮನೆಗೆ ಒಯ್ಯುವ ಮುನ್ನ ಸಿಲಿಂಡ್ ತೂಕವನ್ನು ಪರಿಶೀಲಿಸಬೇಕು ವ್ಯತ್ಯಾಸ ಕಂಡುಬಂದಲ್ಲಿ ದೂರವಾಣಿ ಸಂಖ್ಯೆ 9403301977 ನಂಬರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.
ಈ ಕಾರ್ಯಾರಣೆಯ ಸಂದರ್ಭದಲ್ಲಿ ತೂಕ ಮತ್ತು ಅಳತೆ ಇಲಾಖೆಯ ಗೋವಾ ರಾಜ್ಯ ಸಹಾಯಕ ನಿಮಂತ್ರಕ ದೆಮು ಮಾಪಾರಿ, ದಕ್ಷಿಣ ಗೋವಾ ಸಹಾಯಕ ನಿಮಂತ್ರಕ ನಿತಿನ್ ಪುರುಷನ್, ಉತ್ತರ ಗೋವಾ ಸಹಾಯಕ ನಿಮಂತ್ರಕ ಗುಲಾಮ್ ಗುಲ್ಬರ್ಗ ರವರ ಮಾರ್ಗದರ್ಶನದಲ್ಲಿ ಇತರ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡರು.