ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಬಾಗಾದಲ್ಲಿ ವರದಿಯಾದ ಚಿನ್ನದ ಸರ ಕದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಕಲಂಗುಟ್ ಪೋಲಿಸರು ಬೆಳಗಾವಿಯ ಆರೋಪಿಯನ್ನು ಬಂಧಿಸಿದ್ದಾರೆ.

ಗೋವಾ ಕಲಂಗುಟ್ ಪೋಲಿಸರಿಂದ ಲಭ್ಯವಾದ ಮಾಹಿತಿಯ ಅನುಸಾರ- ಗೋವಾದ ಕಲಂಗುಟ್ ನಲ್ಲಿ ಇತ್ತೀಚೆಗೆ ನಡೆದ ಚಿನ್ನದ ಸರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬೆಳಗಾವಿಯ ನವೀನ್ ಮಡಿವಾಳರ್ (18) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಗೋವಾದ ಕಲಂಗುಟ್ ಅತಿಥಿಗೃಹದಲ್ಲಿ ಡಿಸೆಂಬರ್ 11 ರಂದು ಅಪರಿಚಿತ ವ್ಯಕ್ತಿಯೊಬ್ಬರು ಕೋಣೆಗೆ ಬಲವಂತವಾಗಿ ಪ್ರವೇಶಿಸಿ ಸುಮಾರು 2.40 ಲಕ್ಷ ರೂ ಮೌಲ್ಯದ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆಎಂದು ಈ ಅತಿಥಿಗೃಹದಲ್ಲಿ ತಂಗಿದ್ದ ಜರ್ಮನಿ ಪ್ರಜೆಯೊಬ್ಬರು ಪೋಲಿಸ್ ದೂರು ನೀಡಿದ್ದರು.
ಪೋಲಿಸಿರು ಈ ಕುರಿತು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಬಂಧಿತನಿಂದ ಪೋಲಿಸರು ಚಿನ್ನದ ಸರ ವಷಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.