ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ರಾಮನಗರ ಹಾಗೂ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಹಳ್ಳಿಗಳಲ್ಲಿ ನಡೆದ ಗುರುವಾರದ ಶ್ರೀ ಲಕ್ಷ್ಮೀ ದೇವಿಯ ವೃತಾಚರಣೆ ಸಂಭ್ರಮದಿಂದ ಸಂಪನ್ನಗೊಂಡಿತು.

ಮಾತೆಯರು,ಯುವತಿಯರು ಶೃದ್ಧಾ ಭಕ್ತಿಯಿಂದ ಅಲಂಕೃತಗೊಂಡ ಮಂಟಪದಲ್ಲಿ ಶ್ರೀ ಲಕ್ಷ್ಮೀ ದೇವಿಯ ಭಾವಚಿತ್ರವನ್ನು ಇಟ್ಟು ಕೆಲವರು ವೈದಿಕರ ಮೂಲಕ,ಇನ್ನು ಕೆಲವರು ತಮ್ಮ ತಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ಶ್ರೀ ಲಕ್ಷ್ಮೀ ದೇವಿಯ ಸ್ತೋತ್ರ ಪಠಣ, ಆರತಿ, ಭಜನೆ,ಬಾಲ ಸುಹಾಸಿನಿಯರಿಗೆ ಉಡಿ ತುಂಬುವುದು, ಸುಮಂಗಲಿಯರಿಗೆ ಅರಿಶಿನ,ಕುಂಕುಮ ಹಚ್ಚುವುದು. ಪ್ರಸಾದದ ರೂಪದಲ್ಲಿ ಅನ್ನಪ್ರಸಾದ, ಸಿಹಿ ಪದಾರ್ಥವನ್ನು ನೀಡಿದರು. ಮಾತೆಯರು,ಯುವತಿಯರು ಗುರುವಾರದ ಶ್ರೀ ಲಕ್ಷ್ಮೀ ದೇವಿಯ ವೃತಾಚರಣೆಯನ್ನು ಶೃದ್ಧಾ ಭಕ್ತಿಯಿಂದ ಆಚರಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಶ್ರೀ ದೇವಿಯಲ್ಲಿ ಶೃದ್ಧಾ ಭಕ್ತಿಯಿಂದ ಪ್ರಾರ್ಥಿಸಿದರು.