ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಗ್ರಾಮದ ಶ್ರೀ ಸೋಮೇಶ್ವರ ದೇವಸ್ಥಾನದ ಎದುರಿನ ಗದ್ದೆ ಬಯಲಿನಲ್ಲಿ ಗೆಳೆಯರ ಬಳಗ ಗುಂದದವರು ಆಯೋಜಿಸಿದ್ದ ಸಾಂಸ್ಕೃತಿಕ ಉತ್ಸವದ ನಿಮಿತ್ತ ನಡೆದ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಮಂಡಳಿ ಕಟ್ಟಿಗೆಯವರು ಪ್ರದರ್ಶಿಸಿದ ವೀರಮಣಿ ಕಾಳಗ ಕನ್ನಡ ಯಕ್ಷಗಾನ ಪ್ರಸಂಗ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
ಯಕ್ಷಗಾನ ಪ್ರಸಂಗದ ಹಿಮ್ಮೇಳದ ಭಾಗವತಿಕೆಯಲ್ಲಿ ಮಹೇಶ ಕುಣಬಿ,ಲಕ್ಷ್ಮಣ ಕುಣಬಿ,ಮದ್ದಲೆಯ ವಾದನದಲ್ಲಿ ಕೃಷ್ಣ ಕಣ್ಣೇಕರ,ತುಕಾರಾಮ ಕುಣಬಿ ಕೈಗಡಿ,ಚಂಡೆ ವಾದನದಲ್ಲಿ ಮನೋಜ ಕುಣಬಿ,ಕೃಷ್ಣ ಕುಣಬಿ ಕೈಗಡಿ ಅತ್ಯುತ್ತಮ ಸಹಕಾರ ನೀಡಿದರು. ಮುಮ್ಮೇಳದಲ್ಲಿ ವೆಂಕಣ್ಣಾ ಕುಣಬಿ,ರಾಮಚಂದ್ರ ಬಿಕ್ಕು ಕುಣಬಿ,ಚಂದ್ರಶೇಖರ ಬಿಕ್ಕು ಕುಣಬಿ,ಕೃಷ್ಣ ನಾರಾಯಣ ಕುಣಬಿ,ರಾಮಚಂದ್ರ ತಿಪ್ಪಯ್ಯ ಕುಣಬಿ,ರವಿ ಪರಮೇಶ್ವರ ಕುಣಬಿ,ನಾರಾಯಣ ಗಣೇಶ ಕುಣಬಿ,ರವಿ ಪಾಯಕ ಕುಣಬಿ ಪಾತ್ರದಾರಿಗಳು ಉತ್ತಮ ಮಾತುಗಾರಿಕೆಯ ಜೊತೆ ತಾಳಕ್ಕೆ ತಕ್ಕ ಕುಣಿತದ ಅಭಿನಯ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.
