ಸುದ್ದಿ ಕನ್ನಡ ವಾರ್ತೆ
ಹಳಿಯಾಳ :ಇದೇ ತಿಂಗಳ 28 ಮತ್ತು 29 ರಂದು 12ನೇ ವರ್ಷದ ಕನ್ನಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಜಾಗೃತಿ,ಅಭಿಮಾನ ಮೂಡಿಸುವ ನಿಟ್ಟಿನಲ್ಲಿ ಇಡೀ ತಿಂಗಳು ವಿವಿಧ ಸ್ಪರ್ಧೆಗಳನ್ನು / ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ದಿನಾಂಕ 28ರಂದು ಅಧಿಕೃತವಾಗಿ ಕನ್ನಡಹಬ್ಬದ ಆಚರಣೆಗೆ ಚಾಲನೆ ನೀಡುತ್ತಿದ್ದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸಂಸ್ಥೆಯ ಆವರಣದಲ್ಲಿ ಚಿಕ್ಕ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಪ್ರತಿಭೆ, ನಿರೂಪಕಿ, ಬರಹ ಗಾರ್ತಿ ಹಾಗೂ ಪ್ರಸ್ತುತ ಪ್ರತಿಷ್ಠಿತ ಕನ್ನಡ ಪ್ರಭ ದಿನ ಪತ್ರಿಕೆಯ ಉಪಸಂಪಾದ ಕಿಯಾಗಿರುವ ಕು.ದಿವ್ಯ ಹೆಗಡೆ ಕಬ್ಬಿನ ಗದ್ದೆಯವರು ಉದ್ಘಾಟಕರಾಗಿ ಆಗಮಿಸಲಿದ್ದಾರೆ. ಹಾಗೆಯೇ ಗೌರವಾನ್ವಿತ ಅತಿಥಿಗಳಾಗಿ ಖ್ಯಾತ ಸಂಗೀತಗಾರರಾದ ಡಾ. ಶ್ರೀಧರ್ ಕುಲಕರ್ಣಿಯವರು ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿಆರ್ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ನ ಆಡಳಿತ ಅಧಿಕಾರಿಗಳಾದ ಪ್ರಕಾಶ್ ಪ್ರಭು ವಹಿಸಲಿದ್ದಾರೆ.
ದಿನಾಂಕ 29ರಂದು ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದ್ದು ಹಳಿಯಾಳದ ಜನಪ್ರಿಯ ಜನಸೇವಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕ ಅಧ್ಯಕ್ಷರಾದ ಶ್ರೀ ಬಸವರಾಜ್ ಬೆಂಡಿಗೇರಿಮಠ ಗೌರವಾನ್ವಿತ ಅತಿಥಿಗಳಾಗಿ ಹಾಗೂ ಹಾಗೂ ತೆರೆಗಾoವ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಅರುಣ್ ನಾಯಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಪೂರ್ಣ ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ನೆರವೇರಿಸಲಾಗುತ್ತಿದ್ದು ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕೋರಲಾಗಿದೆ.
