ಸುದ್ಧಿಕನ್ನಡ ವಾರ್ತೆ
ಪಣಜಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ 4 ನೇಯ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಗೋವಾದ ವಾಸ್ಕೊ ಗಾಂಧೀನಗರದಲ್ಲಿ ಬುಧವಾರ ಸಂಜೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ದಿ.ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಘಟಕದ ಗೌರವ ಕಾರ್ಯದರ್ಶಿ ನಾಗರಾಜ್ ಗೋಂದಕರ್, ಹಿರಿಯ ಕನ್ನಡಿಗರಾದ ಬಂದೇ ಬಗವಾನ್, ಹಸನ್ ಅಲಿ ನದಾಫ್, ಬಾಲಪ್ಪ ಮಾಂತೇಶ ನರ್ಸರಗಿ, ವಾಸ್ಕೊ ನಗರಪಾಲಿಕಾ ಸದಸ್ಯ ಕಾಶೀನಾಥ ಯಾದವ್, ಮತ್ತಿತರರು ಉಪಸ್ಥಿತರಿದ್ದರು.
