ಸುದ್ದಿ ಕನ್ನಡ ವಾರ್ತೆ

ಪಣಜಿ: ಗೋವಾದಿಂದ ಕರ್ನಾಟಕಕ್ಕೆ ಅಮೆರಿಕನ್ ಕರೆನ್ಸಿ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಭಟ್ಕಳ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋವಾದ ಮಡಗಾವ್‌ನಿಂದ  ಕರ್ನಾಟಕದ ಭಟ್ಕಳಕ್ಕೆ ನಕಲಿ ಅಮೇರಿಕನ್ ಕರೆನ್ಸಿ ನೋಟುಗಳನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಭಟ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾದ ಮಾಹಿತಿ ಅನುಸಾರ_ ಬಂಧಿತನನ್ನು ಚಿನ್ನದ ಪಳ್ಳಿಯ ಹತ್ತಿರದ ಬಂಡೆ ಹೌಸ್ ನಿವಾಸಿ ರುಕ್ಸುದ್ದೀನ್ ಸುಲ್ತಾನ್ ಬಾಷಾ (೬೨) ಎಂದು ಗುರುತಿಸಲಾಗಿದೆ. ಪೊಲೀಸರು ಖಚಿತ  ಮಾಹಿತಿಯ ಮೇರೆಗೆ  ಕಾರ್ಯಾಚರಣೆ ನಡೆಸಿ
ಆರೋಪಿತನು ತನ್ನ ಸ್ಕೂಟರ್‌ನಲ್ಲಿ ಮಡಗಾವ್‌ನಿಂದ ಅಮೇರಿಕನ್ ಕರೆನ್ಸಿ ನೋಟುಗಳನ್ನು ತಂದು ಸ್ಥಳೀಯನಾದ ಕಪ್ಪಾ ಮುಜೀಬ್‌ಗೆ ಒಪ್ಪಿಸಲು ಯತ್ನಿಸುತ್ತಿದ್ದಾಗ, ಭಟ್ಕಳ ನಗರ ಪೊಲೀಸ್ ಠಾಣೆಯ ಸಿಪಿಐ ದಿವಾಕರ ಪಿ.ಎಂ. ಅವರ ನೇತೃತ್ವದ ತಂಡ ಶೋಧ ನಡೆಸಿ ವಶಕ್ಕೆ ಪಡೆದಿದೆ.

ಬಂದಿದ್ದ ಆರೋಪಿಯಿಂದ ಭಟ್ಕಳ ಪೊಲೀಸರು  ೧೦೦ ಡಾಲರ್ ಮುಖಬೆಲೆಯ ೧೪ ನೋಟುಗಳು, ೫೦ ಡಾಲರ್ ಮುಖಬೆಲೆಯ ೧೫೬ ನೋಟುಗಳು ಸೇರಿ ಒಟ್ಟಾರೆ ಭಾರತೀಯ ಕರೆನ್ಸಿ ಮೌಲ್ಯ ಕ್ರಮವಾಗಿ ರೂ.೯.೨೦ ಲಕ್ಷ ಹಾಗೂ ರೂ.೮ ಲಕ್ಷ  ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತಂತೆ  ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಂಖೆ ನಡೆಸುತ್ತಿದ್ದಾರೆ.