ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ಪ್ರಮುಖ ಸ್ಥಳ ಅಣಶಿ ಯ ಜನತೆಗೆ ಕಳೆದ ಜುಲೈ ದಲ್ಲೇ ಸಿಗಬೇಕಾದ ಬಿ ಎಸ್ ಎನ್ ಎಲ್ 4G ಬಾಗ್ಯ ಇದುವರೆಗೂ ಸಿಗದೇ ಇರಲು ಕಾರಣ ಯಾವ ಕಾಣದ ಕೈ ಕೆಲಸ ಮಾಡಿದೆ ಎಂದು ತಿಳಿಯಲು ಸಾರ್ವಜನಿಕರು ಕೈ ಕೈ ಹಿಸುಕಿ ಕೊಳ್ಳುತ್ತಿ ದ್ದಾರೆ .

ಅಣಶಿ ಯಲ್ಲಿ ಬಿ ಎಸ್ ಎನ್ ಎಲ್ 2G ನೆಟ್ವರ್ಕ್ ಕಳೆದ ಹಲವು ವರ್ಷ ಗಳಿಂದ ಕೆಲಸ ಮಾಡುತ್ತಿದೆ,ಇಲ್ಲಿ 2G ಬದಲಿಗೆ 4G ಬೇಕಾಗಿದೆ ಎಂಬ ಜನರ ಒತ್ತಾಸೆಗೆ ಕೇಂದ್ರ ಸರ್ಕಾರ ಅಣಶಿ ಯಲ್ಲಿ 4G ನೆಟ್ವರ್ಕ್ ಪ್ರಾರಂಭಿಸಲು ಅನುಮತಿ. ನೀಡಿ ಬೇಕಾದ ಸಲಕರಣೆ ಗಳನ್ನೂ ಕಳಿಸಿತು ಆ ವೇಳೆಯಲ್ಲಿ ತಾಲೂಕಿನ ಹಲವು ಬಾಗಗಳಲ್ಲಿ 4G ನೆಟ್ವರ್ಕ್ ಪ್ರಾರಂಭಿಸಲು ಅನುಮತಿ ನೀಡಿತ್ತು ಅದರಂತೆ ತಾಲೂಕಿನ ಬೇರೆ ಬೇರೆ ಬಾಗಗಳ ಟವರ್ ಗಳಲ್ಲಿ 4G ನೆಟ್ವರ್ಕ್ ನ್ನು ಪ್ರಾರಂಬಿಸಲಾಯಿತು ಆದರೆ ಅಣಶಿ ಯಲ್ಲಿ ಮಾತ್ರ ಇದುವರೆಗೂ 4G ನೆಟ್ವರ್ಕ್ ನ್ನು ಎಲ್ಲ ಸಲಕರಣೆ ಗಳಿದ್ದರೂ ಪ್ರಾರಂಭಿಸದೇ ಇರಲು ಕಾರಣ ವೇನು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ಅಣಶಿ ಯಿಂದ ಕಾರವಾರ ಬೆಳಗಾವಿ ದಾಂಡೇಲಿ ಮತ್ತು ಅಂಬಿಕಾನಗರ ಗಳಿಗೆ ಸಂಪರ್ಕ ನೀಡುವ ರಾಜ್ಯ ಮುಖ್ಯ ರಸ್ತೆ ಹಾಯ್ದು ಹೋಗಿದೆ.ಅಣಶಿ ಪ್ರವಾಸಿಗರಿಗೆ ಸಂಪರ್ಕಕ್ಕೆ ಪ್ರಮುಖ ಕೇಂದ್ರ ಕೂಡ ಹೌದು.ಪ್ರತಿ ದಿನ ಐದು ನೂರಕ್ಕೂ ಹೆಚ್ಚು ವಾಹನ ಗಳು ಇಲ್ಲಿಂದ ಸಾಗುತ್ತಿದ್ದು, ಪ್ರವಾಸಿಗರಿಗೆ ನೆಟ್ವರ್ಕ್ ಅವಶ್ಯಕತೆ ತುಂಬಾ ಇದೆ ಅಣಶಿ ಪ್ರವಾಸೋದ್ಯಮದ ಕೇಂದ್ರವೂ ಹೌದು. ಆದರೆ ಇಲ್ಲಿ 4G ನೆಟ್ವರ್ಕ್ ಪ್ರಾರಂಭಿಸದೇ ಇರಲು ಕಾರಣ ಏನು, ಯಾಕೆ ಸುಸಜ್ಜಿತ ಟವರ್ ಇದ್ದರೂ 4G ನೆಟ್ವರ್ಕ್ ನಮಗೆ ಕೊಡುತ್ತಿಲ್ಲ ಎಂದು ಜನತೆ ಪ್ರಶ್ನೆ ಮಾಡಿದ್ದಾರೆ.

ಸರಕಾರದ ಯಾವುದೇ ಕೆಲಸಕ್ಕೆ ಮತ್ತು ಓ ಟಿ ಪಿ ಗಳಿಗೆ ನೆಟ್ವರ್ಕ್ ಬೇಕು ಅದರಲ್ಲೂ ಸಾರ್ವಜನಿಕರು ಈಗ 4G ನೆಟ್ವರ್ಕ್ ಮೊಬೈಲ್ ಗಳನ್ನು ಬಳಸುವುದರಿಂದ 2G ಬಳಕೆ ತುಂಬಾ ಕಡಿಮೆ ಯಾಗಿದ್ದು 2G ಇದ್ದರೂ ಒಂದೆ ಬಿಟ್ಟರೂ ಒಂದೇ ಎಂಬಂತಾಗಿದೆ ಎಂದು ಜನತೆ ಆರೋಪಿಸಿ, ಕೂಡಲೇ 4G ನೆಟ್ವರ್ಕ್ ಪ್ರಾರ್ಬಿಸಲು ಆಗ್ರಹಿಸಿದ್ದಾರೆ, ಕೆಳೆದ ಜೂಲೈ ನಲ್ಲಿಯೇ ಅಣಶಿ ಗೆ 4G ನೆಟ್ವರ್ಕ್ ಸಲಕರಣೆ ಗಳು ಬಂದು ಬಿದ್ದಿವೆ, ಕೇವಲ ಒಂದೆರಡು ದಿನ ಗಳಲ್ಲಿ ಕನೆಕ್ಟ್ ಮಾಡುವ ಕೆಲಸಕ್ಕೆ ನಾಲ್ಕು ತಿಂಗಳಿಂದ ಕೆಲಸ ಮಾಡದೇ ಇರಲು ಕಾರಣ ವೇನು ಎಂದು ಭಾರತ ಸಂಚಾರ ನಿಗಮ ತಿಳಿದು ಕೂಡಲೇ ಜನತೆಗೆ 4G ನೆಟ್ವರ್ಕ್ ನೀಡುವ ಮೂಲಕ, ಬಿಲ್ ನೀಡುವ ಕಾಳಜಿ ಯನ್ನು ಸಂಪರ್ಕ ನೀಡುವಲ್ಲೂ ತೋರಿಸಬೇಕು ಎಂದು ಅಣಶಿ ಜನತೆ ಆಗ್ರಹಿಸಿದ್ದಾರೆ.