Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ನಗರಬಾವಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ನರಕಾಸುರನ ದಹನದ ತಯಾರಿ ಜೋರಾಗಿ ನಡೆದಿದೆ.

Banner Ad

ಇಲ್ಲಿನ ಎನ್.ಎಸ್.ಎಸ್ ಬಾಯ್ಸ್ ತಂಡದ ಸದಸ್ಯರು ನರಕಾಸುರನ ಪ್ರತಿಮೆಯನ್ನು ಮಾಡಿ ಸಂಜೆ ಮೆರವಣಿಗೆಯ ಮೂಲಕ ನಸುಕಿನ ಜಾವ ನರಕಾಸುರನ ದಹನ ಮಾಡಿ ಅಭ್ಯಂಗ ಸ್ನಾನ ಮಾಡುವ ಪದ್ಧತಿ ಇದೆ. ಜೋಯಿಡಾ ಕೇಂದ್ರ ಸ್ಥಾನದಲ್ಲಿ ದೀಪಾವಳಿಯ ಹಬ್ಬದ ನಿಮಿತ್ತ ಪೂಜಾ ಸಾಮಗ್ರಿ, ಹೂವು, ದೀಪಗಳ ಅಲಂಕಾರ ವಸ್ತುಗಳನ್ನು ಮಾರಾಟ, ಖರೀದಿಸುವ ವಹಿವಾಟು ಜೋರಾಗಿ ನಡೆದಿದೆ.

Banner Ad