ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ತಿನೈಘಾಟ ಸೇತುವೆಯ ಬಳಿ ಪತ್ತೆಯಾದ ನಂದಗಡದ ದುರ್ಗಾನಗರದ ಅಶ್ವಿನಿ ಬಾಬುರಾವ ಪಾಟೀಲ ವಯಸ್ಸು 50 ಅವರ ಹತ್ಯೆ ಪ್ರಕರಣ ಬಯಲಾಗಿದ್ದು,ಶಂಕಿತ ಮುಖ್ಯ ಆರೋಪಿ ಟೆಂಪೋ ಚಾಲಕ ಶಂಕರ ಪಾಟೀಲ (ವಯಸ್ಸು 35) ಎಂಬಾತನನ್ನು ರಾಮನಗರ ಪೊಲೀಸರು ಬಂಧಿಸಿದ್ದಾರೆ.
ಲಭ್ಯವಾದ ಮಾಹಿತಿಯ ಪ್ರಕಾರ ಅಕ್ಟೋಬರ್ 2 ರಂದು ಶಂಕರ ಪಾಟೀಲ ಅವರು ತಮ್ಮ ಟೆಂಪೋ ಮೂಲಕ ಅಶ್ವಿನಿ ಪಾಟೀಲ ಅವರನ್ನು ಕಕ್ಕೇರಿ ಜಾತ್ರೆಗೆ ಕರೆದುಕೊಂಡು ಹೋಗಿದ್ದರು.ಜಾತ್ರೆ ಮುಗಿದ ಬಳಿಕ ಹಿಂದಿರುಗುವಾಗ ಚಾಲಕನು ಬೀಡಿ ಬಳಿ ಇಳಿಸಿದ್ದೇನೆ ಎಂದು ಅವರು ಪೋಲಿಸರಿಗೆ ಹೇಳಿಕೆ ನೀಡಿದ್ದರು.ಆ ವೇಳೆಗೆ ನಂದಗಡದ ಪೋಲಿಸರು ವಿಚಾರಣೆ ನಡೆಸಿ ಅವರನ್ನು ಬಿಡುಗಡೆ ಮಾಡಿದ್ದರು. ಆದರೆ ಕೆಲವು ದಿನಗಳ ಬಳಿಕ ಅಶ್ವಿನಿ ಪಾಟೀಲ ಅವರ ಮೃತ ದೇಹ ತಿನೈಘಾಟ ಸೇತುವೆಯ ನೀರಿನಲ್ಲಿ ಪತ್ತೆಯಾದಾಗ ಪ್ರದೇಶ ದಲ್ಲಿ ಸಂಚಲನ ಉಂಟಾಯಿತು.ಘಟನೆಯ ನಂತರ ಶಂಕರ ಪಾಟೀಲ ಪರಾರಿ ಯಾಗಿದ್ದರು.ಅವರನ್ನು ಪತ್ತೆಹಚ್ಚಲು ರಾಮನಗರ ಪೋಲಿಸರು ವಿಶೇಷ ಪಡೆಯನ್ನು ರಚಿಸಿ ಶೋಧ ಕಾರ್ಯಾಚರಣೆ ಆರಂಭಿಸಿ,ಕೇವಲ 24 ಗಂಟೆಗಳ ಒಳಗೆ ಪೋಲಿಸರು ಅವರನ್ನು ನಂದಗಡದಲ್ಲಿ ಬಂಧಿಸಲು ಯಶಸ್ವಿಯಾಗಿದ್ದಾರೆ.
ಅಶ್ವಿನಿ ಪಾಟೀಲ ಹತ್ಯೆಯ ಹಿಂದೆ ನಿಖರವಾದ ಕಾರಣ ಇನ್ನೂ ಸ್ಪಷ್ಟ ವಾಗದಿದ್ದರೂ ಈ ಅಪರಾಧದ ಮೂಲ ಸೂತ್ರದಾರ ಶಂಕರ ಪಾಟೀಲನೇ ಎಂಬ ಶಂಕೆ ಪೋಲಿಸರಿಗೆ ಇದೆ.ಶಂಕರ ಪಾಟೀಲನನ್ನು ರಾಮನಗರ ಪೋಲಿಸ್ ಕಸ್ಟಡಿಯಲ್ಲಿರಿಸಿ ವಿಚಾರಣೆ ನಡೆಸ ಲಾಗುತಿದ್ದು,ಶೀಘ್ರದಲ್ಲೇ ಪ್ರಕರಣದ ನಿಖರವಾದ ಮಾಹಿತಿ ಹೋರಬೀಳಲಿದೆ ಎಂದು ಪೋಲಿಸ್ ಅಧಿಕಾರಿಗಳು ವಿಶ್ವಾಸವನ್ನು ವ್ಯಕ್ತ ಪಡಿಸಿದ್ದಾರೆ.