ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಯರಮುಖದಲ್ಲಿ ಸಪ್ತ ಸ್ವರ ಸೇವಾ ಸಂಸ್ಥೆ ವತಿಯಿಂದ ಯಕ್ಷಗಾನ ಸಪ್ತಾಹದ ಅಂಗವಾಗಿ ಹತ್ತು ದಿನಗಳ ಕಾಲ ಯಕ್ಷಗಾನ ಸಪ್ತಾಹ ಹಾಗೂ ಯಕ್ಷ ಅಮರ (ಮಂಗಲಾ ಹೆಗಡೆ ವಿರಚಿತ)ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮವನ್ನು ಸೋಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶಂಕರ ಆಳ್ಕೆ ಉದ್ಘಾಟನೆ ಮಾಡಲಿದ್ದು ಹಿರಿಯ ಪತ್ರಕರ್ತ ರಾದ ಹರಿಪ್ರಕಾಶ ಕೋಣೆಮನೆ,ಮಾಜಿ ಶಾಸಕ ಸುನಿಲ ಹೆಗಡೆ, ಮಾಜಿ ಎಮ್ಎಲ್.ಸಿ. ಎಸ್. ಎಲ್. ಘೋಟ್ನೇಕರ , ಸುಬ್ರಾಯ ವಾಳ್ಕೆ ಜಿಲ್ಲಾ ಉಪಾಧ್ಯಕ್ಷರು ಬಿಜೆಪಿ ಇತರ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಊರಿನ ಮಹಿಳೆಯರು ಮತ್ತು ಮಕ್ಕಳು ಹಾಗೂ ಜಿಲ್ಲೆಯ ಯಕ್ಷ ಕಲಾವಿದರಿಂದ ಯಕ್ಷಗಾನ ನಡೆಯಲಿದ್ದು, ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಭಾಗವತರಾದ ಆನಂ ದು ಅಗೇರಾ ಅವರ ಸಾರಥ್ಯದಲ್ಲಿ ಯಕ್ಷಗಾನ ನಡೆಯಲಿದೆ.
ಮೊದಲನೆಯ ದಿನ ಧರ್ಮಾಂಗದ ದಿಗ್ವಿಜಯ,ಕಂಸ ವಧೆ,ಮಾಯಾ ಪುರಿ ಮಹಾತ್ಮೆ ,ಚಂದ್ರಾವಳಿ ವಿಲಾಸ,ರುಕ್ಮಿಣಿ ವಿವಾಹ, ಭಸ್ಮಾಸುರ ಮೋಹಿನಿ, ಹೀರಣ್ಯಾಕ್ಷ ವಧೆ, ಪಾಂಚಜನ್ಯ, ಕೊನೆಯದಿನ ಗದಾಯುದ್ಧ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನವೂ ಪ್ರೇಕ್ಷಕರಿಗೆ ಹಾಗೂ ಕಲಾವಿದರಿಗೆ ಊಟದ ವ್ಯವಸ್ಥೆ ಇದ್ದು ಎಲ್ಲಾ ಯಕ್ಷ ಕಲಾಭಿಮಾನಿಗಳು ಬಂದು ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಸಪ್ತಸ್ವರ ಸೇವಾ ಸಂಸ್ಥೆ ಅಧ್ಯಕ್ಷೆ ಸುಮಂಗಲಾ ದೇಸಾಯಿ ವಿನಂತಿಸಿಕೊಂಡಿದ್ದಾರೆ.