ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ತಾಲೂಕಿನ ಹಾಲಮಡ್ಡಿ ಹಾಗೂ ಮಿರಾಶಿಗಲ್ಲಿಯ ಶ್ರೀದಾಂಡೇಲಪ್ಪನ ಸನ್ನಿಧಾನದಲ್ಲಿ ಸಾವಿರಾರು ಭಕ್ತರು ದರ್ಶನ ಭಾಗ್ಯ ಪಡೆದು ಪುನೀತರಾದರು. ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ಹಣ್ಣು ಕಾಯಿ,ಹೂವುಗಳಿಂದ ಪೂಜೆ ಸಲ್ಲಿಸಿ,ಡೀಡ ನಮಸ್ಕಾರ ಹೀಗೆ ಅನೇಕ ರೀತಿಯಲ್ಲಿ,ತಮ್ಮ ಸಕಲ ಇಚ್ಚೆಗಳನ್ನು ಈಡೇರಿಸುವಂತೆ ಭಕ್ತಿಯಿಂದ ಬೇಡಿಕೊಂಡರು.
ಜಾತ್ರೆಯಲ್ಲಿ ದೇವಸ್ಥಾನ ಸಮಿತಿಯ ವತಿಯಿಂದ ಕುಡಿಯುವ ನೀರಿನ,ಪ್ರಸಾದ ಇನ್ನಿತರ ವ್ಯವಸ್ಥೆ ಅಚ್ಚು ಕಟ್ಟಾಗಿ ಮಾಡಲಾಗಿತ್ತು. ಜಾತ್ರೆಯಲ್ಲಿ ಹೂವು,ಹಣ್ಣು,ಕಾಯಿ,ವಿವಿಧ ತಿಂಡಿತಿನಿಸಿನ,ಮಿಠಾಯಿ ಅಂಗಡಿಗಳು,ಮಕ್ಕಳ ಆಟಿಕೆಯ ಸಾಮಾನುಗಳ,ದಿನಪೋಯೋಗಿ ವಸ್ತುಗಳ ಅಂಗಡಿಗಳಲ್ಲಿ ಭರ್ಜರಿಯ ವ್ಯಾಪಾರ ನಡೆಯಿತು. ಸಂಜೆಯ ವೇಳೆ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಡೀಲಕ್ಸ ಮೈದಾನದಲ್ಲಿ ರಾವಣ,ಕುಂಭ ಕರ್ಣ,ಮೇಘನಾದರ ಪ್ರತಿಕೃತಿ ಯನ್ನು ದಹಿಸಿ ಸಡಗರ ಸಂಭ್ರಮದಿಂದ ರಾಮಲೀಲಾ ಉತ್ಸವವನ್ನು ಆಚರಿಸಲಾಯಿತು.ಶ್ರೀರಾಮ ಮಂದಿರದಿಂದ ಶ್ರೀ ರಾಮಚಂದ್ರನ ಪಲ್ಲಕ್ಕಿ ಡೀಲಕ್ಸ ಮೈದಾನಕ್ಕೆ ಆಗಮಿಸಿದಾಗ ರಂಗುರಂಗಿನ ಸಿಡಿ ಮದ್ದುಗಳ ಪ್ರದರ್ಶನ ನೆರೆದಿದ್ದ ಸಾವಿರಾರು ಭಕ್ತರ ಮನಸೂರೆ ಗೊಂಡಿತು.ಗಣ್ಯರು,ಅಧಿಕಾರಿಗಳು,ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಸಾಕ್ಷಿಯಾದರು.