ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ಐಶಾರಾಮಿ ಕಾರುಗಳ ಕಳ್ಳತನ ಮಾಡಿ ನಂಬರ್ ಪ್ಲೇಟ್ ಬದಲಿಸಿ ಹೊರ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದ ಟೋಳಿಯನ್ನು ಗೋವಾ ಪೋಲಿಸರು ಬೇಧಿಸಿದ್ದಾರೆ. ಗೋವಾದ ಕೋಲ್ವಾ ಪೋಲಿಸರು ಈ ಪ್ರಕರಣದಲ್ಲಿ ಗುಜರಾತ್ ಹಾಗೂ ರಾಜಸ್ಥಾನ ಮೂಲದ ಇಬ್ಬರನ್ನು ಬಂಧಿಸಿದ್ದಾರೆ. ಇನ್ನೂ ಕೆಲವು ಜನ ಆರೋಪಿಗಳು ಪರಾರಿಯಾಗಿದ್ದಾರೆ.

ಈ ಘಟನೆ ಗೋವಾದ ಮಾಪ್ಸಾದ ಕರಸವಾಡಾದ ಅರಣ್ಯ ಭಾಗದಲ್ಲಿ ನಡೆದಿದೆ. ಕೋಲ್ವಾ ಪೋಲಿಸ್ ನಿರೀಕ್ಷಕ ಸಂಜಿತ್ ಕಾಂದೋಳಕರ್ ರವರಿ ಲಭ್ಯವಾಗಿದ್ದ ಗುಪ್ತ ಮಾಹಿತಿಯ ಅನುಸಾರ- ಎರಡು ಟೊಯೊಟಾ ಫೊರ್ಚುನರ್ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದರು.

ಈ ಕಾರನ್ನು ಆರೋಪಿಗಳು ಗೋವಾದ್ ಕಲಂಗುಟ್ ಹಾಗೂ ಕಾಂದೋಳಿಯಿಂದ ಬಾಡಿಗೆಗೆ ಪಡೆದುಕೊಂಡಿದ್ದರು. ಆರೋಪಿಗಳು ಗೋವಾ ನೋಂದಣಿ ನಂಬರ್ ಪ್ಲೇಟ್ ತೆಗೆದು ರಾಜಸ್ಥಾನ ನೋಂದಣಿಯ ನಂಬರ್ ಪ್ಲೇಟ್ ಅಳವಡಿಸುತ್ತಿದ್ದಾಗ ಪೋಲಿಸರು ಧಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೋಲಿಸರು ಘಟನಾ ಸ್ಥಳಕ್ಕೆ ಧಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ ಈ ಆರೋಪಿಗಳ ಸಾಥೀದಾರರು ಪಲಾಯನ ಮಾಡಿದ್ದಾರೆ. ಪಲಾಯನ ಮಾಡಿರುವ ಆರೋಪಿಗಳಿಗಾಗಿ ಪೋಲಿಸರು ಶೋಧ ಕಾರ್ಯ ಕೈಗೆತ್ತಿಕೊಂಡಿದ್ದಾರೆ.
ಈ ಟೋಳಿಯು ಅಂತರಾಜ್ಯ ವಾಹನ ಕಳ್ಳರ ಗ್ರಾಂಗ್ ಗೆ ಸಂಬಂಧ ಹೊಂದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಗೋವಾದಲ್ಲಿ ಪ್ರವಾಸಿಗರಂತೆ ನಟಿಸಿ ಐಶಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ಮಾರಾಟ ಮಾಡುತ್ತಿರುವ ಜಾಲವೇ ಇರುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ.