ಸುದ್ಧಿಕನ್ನಡ ವಾರ್ತೆ
ಪಣಜಿ: ಕರ್ನಾಟಕದಿಂದ ನಡೆಸಲ್ಪಡುವ “ಗೊಝೊ ಕ್ಯಾಬ್ಸ” ಎಂಬ ಆಪ್ ಬೇಸ್ ಟ್ಯಾಕ್ಸಿ ಕಾರುಗಳು ಗೋವಾ ರಾಜ್ಯದಲ್ಲಿ ರಾಜಾರೋಷವಾಗಿ ಪ್ರವಾಸಿಗರಿಗೆ ಸರ್ವಿಸ್ ನೀಡುತ್ತಿವೆ ಎಂದು ಗೋವಾ ಟ್ಯಾಕ್ಸಿ ಮಾಲೀಕ ಸಂಘಟನೆಯ ಪದಾಧಿಕಾರಿ ಯೋಗೇಶ್ ಗೋವೆಕರ್ ಆರೋಪಿಸಿದ್ದಾರೆ. ಸರ್ಕಾರವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸರ್ಕಾರದ ಬಳಿ ಆಘ್ರಹಿಸಿದ್ದಾರೆ.

ಕರ್ನಾಟಕದ ಗೊಝೋ ದಂತಹ ಯಾಪ್ ಆಧಾರಿತ ಟ್ಯಾಕ್ಸಿ ಆಪರೇಟರ್ ಗಳಿಂದಾಗಿ ಗೋವಾದಲ್ಲಿ ಪಾರಂಪರಿಕವಾಗಿ ಜೀವನ ನಡೆಸುತ್ತಿರುವ ಟ್ಯಾಕ್ಸಿ ಚಾಲಕರ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಗೋಝೊ ಕ್ಯಾಬ್ಸ ರವರ ಮುಖ್ಯ ಕಛೇರಿ ಕೊಲ್ಕತ್ತಾದಲ್ಲಿದೆ. ಈ ಟ್ಯಾಕ್ಸಿ ಸೇವೆ ದೇಶಾದ್ಯಂತ ಇದೆ. ಆದರೆ ಗೋವಾಕ್ಕೆ ಬಾಡಿಗೆಗೆ ಬಂದಿರುವ ಗೊಝೊ ಟ್ಯಾಕ್ಸಿ ಚಾಲಕರು ವಾಪಸ್ಸು ಹೋಗುವಾಗ ಗೋವಾದಿಂದ ಮತ್ತೆ ಬೇರೆ ಪ್ರವಾಸಿಗರನ್ನು ಕಡಿಮೆ ದರದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಇರಿಂದಾಗಿ ಗೋವಾದಲ್ಲಿ ಟ್ಯಾಕ್ಸಿ ಓಡಿಸಿಕೊಂಡು ಜೀವನ ನಡೆಸುತ್ತಿರುವವರಿಗೆ ನಷ್ಠವುಂಟಾಗುತ್ತಿದೆ ಎಂದು ಯೋಗೇಶ್ ಗೋವೇಕರ್ ಹೇಳಿದ್ದಾರೆ.

ಗೋವಾ ಸರ್ಕಾರವು ಮಧ್ಯ ಪ್ರವೇಶಿಸಿ ಇಂತಹ ಅನಧೀಕೃತ ಟ್ಯಾಕ್ಸಿ ಸೇವೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಘ್ರಹಿಸಿದ್ದಾರೆ.
ಗೋವಾಕ್ಕೆ ಬಂದು ಇಂತಹ ಅಕ್ರಮ ಟ್ಯಾಕ್ಸಿ ವ್ಯವಹಾರದ ಮೇಲೆ ನಿರ್ಬಂಧ ಹೇರಬೇಕು. ಈ ಹಿಂದೆ ಮಹಾರಾಷ್ಟ್ರದ ಟ್ಯಾಕ್ಸಿ ಹಾಗೂ ಉಬೆರ ಟ್ಯಾಕ್ಸಿ ಗೋವಾಕ್ಕೆ ಬಂದಿತ್ತು. ಆದರೆ ಇಂತಹ ಸೇವೆಗಳಿಗೆ ಗೋವಾದ ಟ್ಯಾಕ್ಸಿ ಮಾಲೀಕರಿಂದ ವಿರೋಧ ವ್ಯಕ್ತಪಡಿಸಿದ್ದನ್ನು ಕೂಡ ಯೋಗೇಶ್ ಗೋವೆಕರ್ ಮಾಹಿತಿ ನೀಡಿದರು.