ಸುದ್ದಿ ಕನ್ನಡ ವಾರ್ತೆ

ಇತ್ತೀಚಿಗೆ ಆಗುಂಬೆ ಗ್ರಾಮಪಂಚಾಯತಿ ಹಾಗೂ ಬಿದರಗೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ
ಆಗಸರಕೋಣೆ, ಕಾರೆಕುಂಬ್ರಿ, ಜಡ್ಡು, ಮಳಲಿ, ತಲ್ಲೂರು, ಆಗುಂಬೆ, ಉಳುಮಡಿ ಭಾಗದಲ್ಲಿ ಹಾಗೂ
ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಸಂಚರಿಸುತ್ತಿರುವುದಾಗಿ ಅರಣ್ಯ ಇಲಾಖೆಯ ಪ್ರಕಟಣೆ ಹೊರಡಿಸಿತ್ತು.

ಶೃಂಗೇರಿ ಭಾಗದಿಂದ ಬಂದಿರುವ ಕಾಡಾನೆ ತೀರ್ಥಹಳ್ಳಿ ಬಾರ್ಡರ್ ಗೆ ಬಂದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಬಿತ್ತರ ಮಾಡಲಾಗಿತ್ತು. ಆದರೆ ಅದು ಸುಳ್ಳು ಎಂಬುದಾಗಿ ಹಲವರು ವಿಮರ್ಶೆ ಮಾಡಿದರು. ಆ ನಂತರ ಆಗುಂಬೆ ಭಾಗಕ್ಕೆ ಕಾಡಾನೆ ಬಂದಿರುವುದು ಹೌದು ಎಂದು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿತ್ತು. ಆ ನಂತರ ಕಾಣದೆ ಮಾಯವಾಗಿದ್ದ ಕಾಡಾನೆ ಇಂದು ಭಾನುವಾರ ಸಂಜೆ 7:30ರ ಸಮಯದಲ್ಲಿ ಆಗುಂಬೆ ಚರ್ಚ್ ಬಳಿ ಕಾಣಿಸಿಕೊಂಡಿದೆ.

ಈಗಾಗಲೇ ಪೊಲೀಸ್ ಇಲಾಖೆಯಿಂದ ಮೈಕ್ ಮೂಲಕ ಮಕ್ಕಳು, ವೃದ್ಧರು ಹೆಚ್ಚಿನ ಜಾಗರೂಕತೆಯಿಂದ ಸಂಚರಿಸಬೇಕು ಹಾಗೂ ಹಾಗೂ ಸಂಜೆ ಆರು ಗಂಟೆಯಿಂದ ಮೇಲ್ಕಂಡ ಗ್ರಾಮಗಳಲ್ಲಿ ವಾಹನಗಳಲ್ಲಿ ಹಾಗೂ ಕಾಲ್ನಡಿಗೆಯಲ್ಲಿ ಅನಗತ್ಯವಾಗಿ ಒಡಾಡಬಾರದೆಂದು ತಿಳಿಸಲಾಗುತ್ತಿದೆ.