ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪೊಂಡಾದ ಹೋಟೆಲ್ ವೊಂದರಲ್ಲಿ ನಡೆಯುತ್ತಿದ್ದ ವೆಶ್ಯಾವಾಟಿಕೆಯನ್ನು ಬೇಧಿಸಿ ಪರಾರಿಯಾಗಿದ್ದ ಮಾಸ್ಟರ್ ಮೈಂಡ್ ಸಲೀಮ್ ಇಬ್ರಾಹಿಮ್ ಕುಶೆರಿ (43) ಎಂಬ ಬೆಳಗಾವಿ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಪೊಂಡಾ ಪೋಲಿಸರು ಯಶಸ್ವಿಯಾಗಿದ್ದಾರೆ.
ಗೋವಾದ ಪೊಂಡಾದ ಹೋಟೆಲ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತಂತೆ ಪೊಂಡಾ ಪೋಲಿಸರಿಗೆ ಮಾಹಿತಿ ಲಭಿಸಿತ್ತು. ಪೋಲಿಸ್ ನಿರೀಕ್ಷಕ ವಿಜಯನಾಥ ಕವಳೇಕರ್ ರವರ ಮಾರ್ಗದರ್ಶನದಲ್ಲಿ ತನಿಖಾ ತಂಡವೊಂದನ್ನು ರಚಿಸಲಾಗಿತ್ತು. ಈ ತಂಡದಲ್ಲಿ ಸ್ವಯಂ ಸೇವಾ ಸಂಸ್ಥೆಯನ್ನೂ ಸೇರಿಸಿಕೊಳ್ಳಲಾಗಿತ್ತು. ಇವರು ಗ್ರಾಹಕರಂತೆ ನಟಿಸಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಮೂವರನ್ನು ಬಂಧಿಸಿ ಮಹಿಳೆಯನ್ನು ಸುಧಾರಣಾಗೃಹಕ್ಕೆ ಕಳುಹಿಸಲಾಗಹಿದೆ.
ಪೋಲಿಸರು ಪಶ್ಚಿಮ ಬಂಗಾಳದ ನಜೀಮ್ (33), ಜಮೇದಾರ್ (38), ಉತ್ತರಪ್ರದೇಶದ ರಾಜೇಶ್ ಗೌಡ(49) ಎಂಬ ಮೂವರು ಶಂಕಿತರನ್ನು ಪೋಲಿಸರು ಬಂಧಿಸಿದ್ದಾರೆ. ಸದ್ಯ ಈ ಮೂವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುವ ಬೆಳಗಾವಿಯ ಸಲೀಮ್ ಕುರೇಶಿ ಎಂಬ ಆರೋಪಿ ತಪ್ಪಿಸಿಕೊಂಡಿದ್ದ. ಪೊಂಡಾ ಪೋಲಿಸರು ಬೆಳಗಾವಿಗೆ ತೆರಳಿ ಕಾರ್ಯಾಚರಣೆ ನಡೆಸಿ ಈ ಆರೋಪಿಯನ್ನು ಬಂಧಿಸಿ ಗೋವಾಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ನಜೀಮ್ ಹಾಗೂ ಜಮೇದಾರ್ ಈ ಇಬ್ಬರೂ ಆರೋಪಿಗಳು ಯುವತಿಯರನ್ನು ವೇಶ್ಯಾವಾಟಿಕೆಗೆ ಕರೆತರುತ್ತಿದ್ದರು ಎನ್ನಲಾಗಿದೆ. ಇಂತಹ ಯುವತಿಯರನ್ನು ಗೋವಾಕ್ಕೆ ಕರೆತಂದ ನಂತರ ರಾಜೇಶ್ ಗೌಡ ಎಂಬ ವ್ಯಕ್ತಿ ಗ್ರಾಹಕರನ್ನು ಕರೆತರುತ್ತಿದ್ದ. ಬೆಳಗಾವಿಯ ಸಲೀಮ್ ಕುರೇಶಿ ಈತ ಎಲ್ಲೆಡೆ ಲಕ್ಷ್ಯ ವಹಿಸುತ್ತಿದ್ದ ಹಾಗೂ ಗ್ರಾಹಕರಿಂದ ಹಣ ವಸೂಲಿ ಮಾಡಿ ಇನ್ನುಳಿದ ಎಲ್ಲರಿಗೂ ಹಣ ಹಂಚುತ್ತಿದ್ದ ಎನ್ನಲಾಗಿದೆ. ಇದೀಗ ಈ ವೇಶ್ಯಾವಾಟಿಕೆ ಗ್ಯಾಂಗ್ ನ್ನು ಬೇಧಿಸಲಾಗಿದ್ದು ಪೋಲಿಸ್ ಉಪಧೀಕ್ಷಕ ಶಿವರಾಮ ವಾಯಂಗಣಕರ್ ರವರ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.