ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಪಡೆಯುವುದಿಲ್ಲ ಎಂದು ಕೇಂದ್ರ ಮಂತ್ರಿ ನಿತಿನ್ ಗಡಕರಿ ಈ ಹಿಂದೆ ಭರವಸೆ ನೀಡಿದ್ದರು. ಆದರೂ ಕೂಡ ಇದೀಗ ಗೋವಾದ ಗಡಿ ಭಾಗ ಪತ್ರಾದೇವಿಯಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಆರಂಭಗೊಳ್ಳಲಿದೆ ಎಂಬ ಮುನ್ಸೂಚನೆ ಲಭಿಸಿದಂತಾಗಿದೆ.
ಗೋವಾದ ಪತ್ರಠಾದೇವಿ ಗಡಿಯಿಂದ ಮಹಾರಾಷ್ಟ್ರದಲ್ಲಿ ಕೇವಲ 300 ಮೀಟರ್ ಅಂತರದಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದಿದೆ. ಆದರೆ ಇದುವರೆಗೂ ಅಲ್ಲಿ ಟೋಲ್ ಪಡೆಯಲು ಆರಂಭಗೊಂಡಿಲ್ಲ. ಆದರೆ ಇದ್ದಕ್ಕಿದ್ದಂತೆಯೇ ಗೋವಾದ ಗಡಿ ಭಾಗ ಪತ್ರಾದೇವಿಯಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಗೋವಾದಲ್ಲಿ ಟೋಲ್ ಆರಂಭಗೊಳ್ಳಲಿದೆ ಎಂಬ ಮುನ್ಸೂಚನೆ ಲಭಿಸಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಪತ್ರಾದೇವಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟೋಲ್ ಗೇಟ್ ನಿರ್ಮಾಣಕ್ಕೆ ಭೂಮಿ ಪಡೆದುಕೊಂಡು ಟೋಲ್ ಗೇಟ್ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ 60 ಕಿಮಿ ಅಂತರದಲ್ಲಿ ಟೋಲ್ ಪಡೆಯುವಂತಿಲ್ಲ. ಇದೀಗ ಗೋವಾದ ಗಡಿಯಲ್ಲಿ ಟೋಲ್ ಆರಂಭಗೊಂಡರೆ ಗೋವಾ ರಾಜ್ಯದ ಜನತೆಗೆ ಹಾಗೂ ಸಿಂಧುದುರ್ಗದ ವಾಹನ ಸವಾರರಿಗೆ ಟೋಲ್ ಹೊರೆ ಬೀಳಲಿದೆ.
ಇಲ್ಲಿ ಟೋಲ್ ಆರಂಭಗೊಂಡರೆ ಗೋವಾ ಹಾಗೂ ಸಿಂಧುದುರ್ಗದ ವಾಹನ ಸವಾರರಿಂದ ವಿರೋಧವುಂಟಾಗುವ ಸಾಧ್ಯತೆ ಹೆಚ್ಚಾಗಿದೆ.