ಸುದ್ದಿ ಕನ್ನಡ ವಾರ್ತೆ
ಕಾರವಾರ:ತಾಲೂಕಿನ ಕೈಗಾ – ಯಲ್ಲಾಪುರ ಸಂಪರ್ಕಿಸುವ ರಸ್ತೆಯ ಬಾರೆ ಸಮೀಪ ಶನಿವಾರ ಬೆಳಗ್ಗೆ ಕೈಗಾ ಘಟಕದ ಅಧಿಕಾರಿ ವರ್ಗಕ್ಕೆ ಕಾರಿನಲ್ಲಿ ಪ್ರಯಾಣಿಸುವ ವೇಳೆ ಹುಲಿರಾಯ ನಡು ರಸ್ತೆಯಲ್ಲಿ ಎದುರಾಗಿದ್ದು,ಸುಮಾರು ಐದು ನಿಮಿಷಗಳ ಕಾಲ ಕಂಡಿದ್ದು,ನಂತರ ಕಾಡಿಗೆ ಸೇರಿಕೊಂಡಿದೆ.
ಕಾರಿನಿಂದ ಮಾಡಿದ ಹುಲಿರಾಯನ ರಾಜಗಾಂಭೀರ್ಯದ ನಡಿಗೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ರಾತ್ರಿಯ ವೇಳೆ ಸಂಚರಿಸುವಾಗ ಹುಲಿರಾಯನ ದರ್ಶನ ವಾಗುವುದು ಸಹಜವಾಗಿತ್ತು,ಈಗ ಹಗಲಿನ ವೇಳೆ ಸಂಚರಿಸುವಾಗ ಕಾಣಿಸಿಕೊಂಡಿದ್ದು ಸ್ವಲ್ಪ ಆತಂಕಕ್ಕೆ ಕಾರಣವಾಗಿದೆ.
ಹಗಲು ಹೊತ್ತಿನಲ್ಲಿಯೇ ಹುಲಿರಾಯ ನಡು ರಸ್ತೆಯಲ್ಲಿ ಓಡಾಟ ನಡೆಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಈ ಭಾಗ ದಟ್ಟ ಅರಣ್ಯ ವಾಗಿದ್ದು ಬೈಕ್ ಸವಾರರು ಈ ಮಾರ್ಗದಲ್ಲಿ ಓಡಾಟ ನಡೆಸಲು ಭಯಪಡುವಂತಾಗಿದೆ.