ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ಕೈಗಾ ಅಣುಸ್ಥಾವರದ ಸಿ.ಆರ್.ಸಿ ವತಿಯಿಂದ ತಾಲೂಕಿನ ಉಳವಿ ಗ್ರಾಮ ಪಂಚಾಯತ ವ್ಯಾಪ್ತಿಯ ಉಳವಿ ಪ್ರಾಥಮಿಕ ಕನ್ನಡ ಶಾಲೆ,ಶ್ರೀ ಚನ್ನ ಬಸವೇಶ್ವರ ಪ್ರೌಢಶಾಲೆ ಉಳವಿ,ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಹೆಣಕೊಳದ ವಿಧ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ಹಾಗೂ ಶೈಕ್ಷಣಿಕ ಮಾರ್ಗದರ್ಶಿ ದಿನ ಪತ್ರಿಕೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಕಾಶಿ ಕೈಗಾ ಅಣುಸ್ಥಾವರದ ಸಿ.ಆರ್.ಸಿ ಹಣದ ಮೂಲಕ ಮಕ್ಕಳಿಗೆ ಮಾಡುತ್ತಿರುವುದು ಉತ್ತಮ ಕೆಲಸ. ಈ ನಿಮ್ಮ ಪ್ರೋತ್ಸಾಹದಿಂದ ಮಕ್ಕಳಿಗೆ ಕ್ರೀಡೆಯಲ್ಲಿ ಮತ್ತು ಓದುವಿಕೆಯಲ್ಲಿ ಆಸಕ್ತಿ ಮೂಡಿಸುವಂತಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೈಗಾ ಅಣುಸ್ಥಾವರ ಘಟಕದ ನಿರ್ದೇಶಕರಾದ ವಿನೋದಕುಮಾರ,ಎಸ್.ಜಿ.ಟಿ ಸಿಬ್ಬಂದಿಗಳಾದ ರೋಹಿದಾಸ ಶೇಟ್,ದಿನೇಶ ಗಾಂವಕರ, ಮಾಸ್ತಿ ಗೊಂಡ, ಕುನಾಲ್ ಬಾಂದೇಕರ ಹಾಗೂ ಉಳವಿ ಶ್ರೀ ಚನ್ನಬಸವೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಎಸ್.ಆರ್
ನರಸಣ್ಣನವರ ಹಾಗೂ ಸಹ ಶಿಕ್ಷಕರ ವೃಂದ ಉಪಸ್ಥಿತರಿದ್ದರು.ಎಲ್ಲಾ ಶಾಲೆಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.