ಸುದ್ದಿ ಕನ್ನಡ ವಾರ್ತೆ
ಗೋವಾದಲ್ಲಿ ತೆಂಗಿನಕಾಯಿ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಹೆಚ್ಚಿನ ದರದ ಭಾರವನ್ನು ಜನತೆಗೆ ಹಬ್ಬದ ಸಮಯದಲ್ಲಿ ಕೊಂಚ ಕಡಿಮೆ ಮಾಡಲು ಗೋವಾ ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಗೋವಾ ರಾಜ್ಯ ಸರ್ಕಾರವು ಕರ್ನಾಟಕದಿಂದ ಗೋವಾದಲ್ಲಿ ಗಣೇಶೋತ್ಸವ ಹಬ್ಬಕ್ಕೆ 1 ಲಕ್ಷ ತೆಂಗಿನಕಾಯಿ ಖರೀದಿಗೆ ಮುಂದಾಗಿದೆ.
ಈ ಕುರಿತಂತೆ ರಾಜ್ಯ ಕೃಷಿ ಮಂತ್ರಿ ರವಿ ನಾಯ್ಕ್ ರವರು ಸೂಚನೆ ನೀಡಿದ್ದು ಗೋವಾ ರಾಜ್ಯ ಕೃಷಿ ಇಲಾಖೆ ಹಾಗೂ ಗೋವಾ ಪಲೋತ್ಪಾದನ ಮಹಾಮಂಡಳ ಇವುಗಳ ಆಶ್ರಯದಲ್ಲಿ ಕರ್ನಾಟಕದಿಂದ ಗೌರಿ ಗಣೇಶ ಹಬ್ಬಕ್ಕೆ ಒಂದು ಲಕ್ಷ ತೆಂಗಿನ ಕಾಯಿ ಖರೀದಿ ಮಾಡಲಿದೆ.
ಮೊದಲ ಹಂತದಲ್ಲಿ ಇನ್ನು ಎರಡು ದಿನಗಳಲ್ಲಿ ಕರ್ನಾಟಕದಿಂದ 25,000 ತೆಂಗಿನ ಕಾಯಿ, ಗೋವಾಕ್ಕೆ ಧರಿಸಿಕೊಳ್ಳಲಾಗುತ್ತಿದೆ. ಈ ತೆಂಗಿನ ಕಾಯಿಯನ್ನು ಓಡಾಡುವ ವಾಹನಗಳ ಮೂಲಕ ರಾಜ್ಯದ ಜನತೆಗೆ ಸಬ್ಸಿಡಿ ದರದಲ್ಲಿ ವಿತರಿಸಲು ಸರ್ಕಾರ ಯೋಜನೆ ರೂಪಿಸಿದೆ. ಇದರಿಂದಾಗಿ ಗಣೇಶ ಹಬ್ಬ ಆರಂಭಕ್ಕೂ ಮುನ್ನ ಜನರಿಗೆ ಸಬ್ಸಿಡಿ ದರದಲ್ಲಿ ತೆಂಗಿನಕಾಯಿ ಲಭಿಸಲಿದೆ.
ಗೋವಾ ರಾಜ್ಯದಲ್ಲಿ ಸದ್ಯ ದೊಡ್ಡ ಗಾತ್ರದ ತೆಂಗಿನಕಾಯಿ 70 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಗಣೇಶ ಚತುರ್ಥಿಯ ಹಬ್ಬದ ಸಂದರ್ಭದಲ್ಲಿ ಈ ತೆಂಗಿನ ಕಾಯಿ ದರ ನೂರು ರೂಗೆ ತಲುಪುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗೋವಾ ರಾಜ್ಯ ಸರ್ಕಾರವು ರಾಜ್ಯದ ಜನತೆಗೆ ಹಬ್ಬದ ಸಂದರ್ಭದಲ್ಲಿ ಉಂಟಾಗುವ ತೊಂದರೆಯನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಂಡಿದೆ.