ಸುದ್ಧಿಕನ್ನಡ ವಾರ್ತೆ
ಕಳೆದ ಎರಡು ವರ್ಷಗಳಿಂದ ಗೋವಾ ರಾಜ್ಯದಲ್ಲಿ ನಡೆಸಿಕೊಂಡು ಬಂದಿರುವಂತೆಯೇ ಪ್ರಸಕ್ತ ವರ್ಷವೂ ಕೂಡ ರಾಷ್ಟ್ರ ಕಲ್ಯಾಣದ ಸಂಕಲ್ಪವನ್ನಿಟ್ಟುಕೊಂಡು ಶ್ರೀ ಮಂಜುನಾಥ ಭಟ್ ರವರ ಆರ್ಷವಿದ್ಯಾ ಟ್ರಸ್ಟ (ರಿ) ವತಿಯಿಂದ ಜುಲೈ 20 ರಂದು ಭಾನುವಾರ ಗೋವಾದ ಸಾವರ್ಡೆ ಕುಡಚಡೆಯ ಶ್ರೀ ಸಾತೇರಿ ಸಂಸ್ಥಾನ ಶಳವಣದಲ್ಲಿ ಆಯುಷ್ಮಾನ್ ಭವ ವಿಜಯಿ ಭವದದ 325 ನೇಯ ಅನುಷ್ಠಾನ- ಶ್ರೀಸೂಕ್ತ ಪುರುಷ ಸೂಕ್ತ ಹವನ, ವಾಸುದೇವ ಮಂತ್ರ ಹವನ, ಆದಿತ್ಯಹೃದಯ ಸ್ತೋತ್ರ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ದೇಶದ ಕಲ್ಯಾಣಕ್ಕಾಗಿ ಆರ್ಷವಿದ್ಯೆಯ ಉಳಿವಿಗಾಗಿ ನಡೆಸಲ್ಪಡುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಿಸಬೇಕಿದೆ. ಕಳೆದ ಎರಡು ವರ್ಷಗಳಿಂದ ಗೋವಾ ರಾಜ್ಯದಲ್ಲಿ ನಡೆಸಿಕೊಂಡು ಬಂದಿರುವಂತೆಯೇ ಪ್ರಸಕ್ತ ವರ್ಷವೂ ಕೂಡ ರಾಷ್ಟ್ರ ಕಲ್ಯಾಣದ ಸಂಕಲ್ಪವನ್ನು ಇಟ್ಟುಕೊಂಡು ವೈದಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮದ ದಿನ ದೇವತಾ ಕಾರ್ಯದಲ್ಲಿ ಎಲ್ಲರೂ ಭಾಗಿಯಾಗಬೇಕೆಂದು ಕೋರಲಾಗಿದೆ.

ಕಾರ್ಯಕ್ರಮದಲ್ಲಿ ಶ್ರೀಸೂಕ್ತ, ಪುರುಷಸೂಕ್ತ, ಪಾರಾಯಣ ಮಾಡಬಹುದಾಗಿದೆ. ಎಲ್ಲರೂ ಆದಿತ್ಯ ಹೃದಯ ಪಾರಾಯಣ ಮಾಡಬಹುದಾಗಿದೆ. ಮುತ್ತೈದೆಯರು ಕುಂಕುಮಾರ್ಚನೆ ಸೇವೆ ಸಲ್ಲಿಸಬಹುದಾಗಿದೆ. ಕಾರ್ಯಕ್ರಮಕ್ಕೆ ಹತ್ತಾರು ಜನ ಬ್ರಾಹ್ಮಣರು ಕುಳಿತುಕೊಳ್ಳಬೇಕಾಗಲಿದೆ. ಊಟ,ತಿಂಡಿ, ಕಾರ್ಯಕ್ರಮದ ತಯಾರಿ, ಹೀಗೆ ಹತ್ತಾರು ರೀತಿಯಲ್ಲಿ ಸೇವಾ ಕಾರ್ಯ ಕೈಗೊಳ್ಳಬಹುದಾಗಿದೆ.

ನಮ್ಮಿಂದ,ನಮಗಾಗಿ, ನಾವೇ ಎಲ್ಲರೂ ಒಂದಾಗಿ ಮಾಡುತ್ತಿರುವ ಕಾರ್ಯಕ್ರಮ ಇದಾಗಿದೆ.ಈ ಸತ್ಕಾರ್ಯಕ್ಕೆ ಹೆಚ್ಚಿನ ಜನರ ಉಪಸ್ಥಿತಿ ಅಗತ್ಯವಿದೆ. ಈ ಕಾರ್ಯಕ್ರಮಕ್ಕೆ ತಮ್ಮ ತನು ಮನ ಧನ ಸಹಾಯ ಮಾಡಲು ಇಚ್ಛಿಸುವವರು ಹಾಗೂ ಕಾರ್ಯಕ್ರಮಕ್ಕೆ ಆಗಮಿಸುವವರು ಸತೀಶ್ ಹೆಗಡೆ ಮಡಗಾಂವ-ದೂ 7385166299, ಮಹೇಶ ಹೆಗಡೆ ಮಡಗಾಂವ-ದೂ 9511842066, ಗುರುದಾಸ್ ಭಟ್ ಮಡಗಾಂವ-ದೂ 9665708708, ಉದಯ ಭಟ್ ಶಳವಣ-ದೂ 9765080708 ರವರನ್ನು ಸಂಪರ್ಕಿಸಬಹುದಾಗಿದೆ.