ಸುದ್ದಿಕನ್ನಡ ವಾರ್ತೆ
ಗುಜರಾತ್: ಯಾವುದೇ ಘಟನೆ ಸಂಭವಿಸಿದರೂ ಕೂಡ ಅದು ಶೇರು ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಗುರುವಾರ ಗುಜರಾತ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ಘಟನೆ ಶೇರು ಮಾರುಕಟ್ಟೆಯ ಮೇಲೆ ಗಣನೀಯ ಪರಿಣಾಮವುಂಟುಮಾಡಿದೆ.(The incident of plane crash has had a significant impact on the stock market.)
ಗುಜರಾತ್ ರಾಜಧಾನಿ ಅಹ್ಮದಾಬಾದ್ ನಲ್ಲಿ ಗುರುವಾರ ಮಧ್ಯಾನ್ಹ ಏರ್ ಇಂಡಿಯಾ ವಿಮಾನ ಪತನವಾಗುತ್ತಲೇ ಆ ಸಂಸ್ಥೆಗೆ ಸಂಬಂಧಿಸಿದ ಷೇರುಗಳೂ ಕೂಡ ತಲ್ಲಣಿಸಿದೆ. ಅಹಮದಾಬಾದ್ ಏರ್ ಪೆÇೀರ್ಟ್ ಬಳಿ ಟೇಕ್ ಆಫ್ ಆಗುತ್ತಿದ್ದಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೇವಲ ಐದೇ ನಿಮಿಷದಲ್ಲಿ ವಿಮಾನ ಪತನಗೊಂಡಿತ್ತು.
ಅತ್ತ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗುತ್ತಲೇ ವಿಮಾನಯಾನ ಸೇವೆಗೆ ಸಂಬಂಧಿಸಿದ ಪ್ರಮುಖ ಎಲ್ಲಾ ಷೇರುಗಳ ಮೌಲ್ಯ ಗಣನೀಯವಾಗಿ ಕುಸಿದಿದೆ. ಪ್ರಮುಖವಾಗಿ ಬೋಯಿಂಗ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು, ಏರ್ ಇಂಡಿಯಾ ವಿಮಾನ ಪತನದ ಬೆನ್ನಲ್ಲೇ ಬೋಯಿಂಗ್ ಸಂಸ್ಥೆಯ ಷೇರುಮೌಲ್ಯ ಬರೊಬ್ಬರಿ ಶೇ.8ರಷ್ಟು ಕುಸಿತ ಕಂಡಿದೆ.
ಬಳಿಕ ದಿನದ ವಹಿವಾಟು ಅಂತ್ಯದ ವೇಳೆಗೆ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಂಡು ಶೇ.0.85ರಷ್ಟು ಮೌಲ್ಯ ಕುಸಿತವಾಗಿದೆ. ಬೋಯಿಂಗ್ ಮಾತ್ರವಲ್ಲದೇ ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳ ಷೇರು ಮೌಲ್ಯ ಕೂಡ ಶೇ.3ರಷ್ಟು ಕುಸಿತಗೊಂಡಿವೆ.. ಈ ಪೈಕಿ ಇಂಡಿಗೋ ಸಂಸ್ಥೆಯ ಷೇರು ಮೌಲ್ಯ 3.7ರಷ್ಟು ಕುಸಿದಿದ್ದರೆ, ಸ್ಪೈಸ್ ಜೆಟ್ ಷೇರುಗಳ ಮೌಲ್ಯ 2.6ರಷ್ಟು ಕುಸಿದಿದೆ.
ಇನ್ನು ವಿಮಾನ ದುರಂತ ಭಾರತೀಯ ಷೇರುಮಾರುಕಟ್ಟೆ ಮೇಲೂ ನಕಾರಾತ್ಮಕ ಪರಿಣಾಮ ಬೀರಿದ್ದು, ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ರೆಡ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.ಶೇರು ಹೂಡಿಕೆದಾರರಿಗೆ ಹೆಚ್ಚಿನ ನಷ್ಠ ಉಂಟಾಗಿದೆ.