ಸುದ್ದಿಕನ್ನಡ ವಾರ್ತೆ
ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಮಧ್ಯಾನ್ಹ ಏರ್ ಇಂಡಿಯಾ ವಿಮಾನ ಪತನವಾಗಿದೆ. ಈ ವಿಮಾನದಲ್ಲಿ ಯಾವ್ಯಾವ ದೇಶದವರು ಎಷ್ಟು ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು ಎನ್ನುವ ಸಂಪೂರ್ಣ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ.

ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದಲ್ಲಿ 242ಕ್ಕೂ ಹೆಚ್ಚು ಜನ ಪ್ರಯಾಣಿಕರು ಪ್ರಯಾಣ ಮಾಡುತ್ತುದ್ದರು ಎನ್ನುವ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಇದೀಗ ಯಾವ್ಯಾವ ದೇಶದವರು ಎಷ್ಟು ಮಂದಿ ಪ್ರಯಾಣ ಮಾಡುತ್ತಿದ್ದರು ಎನ್ನುವ ಮಹತ್ವದ ಮಾಹಿತಿ ಲಭ್ಯವಾಗಿದೆ.

ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ 171 ಏರ್ ಇಂಡಿಯಾ ವಿಮಾನ ಗುಜರಾತ್‍ನ ಅಹಮದಾಬಾದ್ ನಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಲಂಡನ್‍ಗೆ ಹೊರಟಿದ್ದ ಈ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದ್ದು, ಸುಮಾರು ಮಧ್ಯಾಹ್ನ 1:50 ಕ್ಕೆ ಈ ಘಟನೆ ನಡೆದಿದೆ ಎಂದು ಎನ್ನಲಾಗಿದೆ.

ಯಾವ್ಯಾವ ದೇಶದವರು ಎಷ್ಟು ಪ್ರಯಾಣಿಕರಿದ್ರು?
ಭಾರತೀಯರು – 169 ಜನ
ಬ್ರಿಟನ್ – 53
ಕೆನಡಿಯನ್ನರು – 1
ಪೆÇೀರ್ಚುಗೀಸರ – 7 ಜನ ಪ್ರಯಾಣಿಸುತ್ತಿದ್ದರು.

ಯವ್ಯಾವ ವಯಸ್ಸಿನವರು ಎಷ್ಟು ಜನ ಇದ್ರು?
ವಯಸ್ಕರು – 217 ಜನ
ಮಕ್ಕಳು – 11
ಶಿಶುಗಳು – 2 ಪ್ರಯಾಣಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.