ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದ ಮಾಪ್ಸಾದಲ್ಲಿ ಕವಿಶೈಲ ಕನ್ನಡ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಕನ್ನಡ ಗಣಪನ ದರ್ಶನಕ್ಕೆ ಗೋವಾ ರಾಜ್ಯದ ವಿವಿದೆಡೆಯಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಲ್ಲಿ ಪ್ರತಿಷಿನ ಅನ್ನ ಪ್ರಸಾದ ವ್ಯವಸ್ಥೆಇನ್ನು ಕಲ್ಪಿಸಲಾಗಿದೆ.

ಕಳೆದ ಸುಮಾರು 12 ವರ್ಷಗಳಿಂದ ಇಲ್ಲಿ ಕವಿಶೈಲ ಕನ್ನಡ ಸಂಘವು ಕನ್ನಡ ಗಣಪನನ್ನು ಪ್ರತಿಷ್ಠಾಪಿಸುತ್ತಿದೆ. ಪ್ರತಿ ವರ್ಷದಂತೆಯೇ ಪ್ರಸಕ್ತ ವರ್ಷವೂ ಕೂಡ 9 ದಿನಗಳ ಕಾಲ ಕನ್ನಡ ಗಣಪನನ್ನು ಪೂಜಿಸಲಾಗುತ್ತಿದೆ. ಪ್ರತಿದಿನ ಮಧ್ಯಾನ್ಹ ನೂರಾರು ಜನ ಭಕ್ತಾದಿಗಳು ಇಲ್ಲಿ ಪ್ರಸಾದ ಭೋಜನ ಮಾಡುತ್ತಿದ್ದಾರೆ. ಪ್ರತಿದಿನ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಹಾಗೂ ಗಣೇಶ ಮಂಡಳದ ಅಧ್ಯಕ್ಷ ಶಂಭು ಶೆಟ್ಟರ್ ಸುದ್ಧಿಗಾರರೊಂದಿಗೆ ಮಾತನಾಡಿ-ಕಳೆದ ಸುಮಾರು 12 ವರ್ಷಗಳಿಂದ ಮಾಪ್ಸಾ ಕವಿಶೈಲ ಕನ್ನಡ ಸಂಘದ ವತಿಯಿಂದ ಮಾಪ್ಸಾದ ಬಸ್ ನಿಲ್ದಾಣದ ಬಳಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ನಮಗೆ ಭಕ್ತಾದಿಗಳ ಹೆಚ್ಚಿನ ಸಹಕಾರ ಲಭಿಸುತ್ತಿದೆ. ನಮಗೆ ಇಲ್ಲಿರುವ ಕನ್ನಡಿಗರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಕನ್ನಡಿಗರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕನ್ನಡ ಗಣಪನ ದರ್ಶನ ಪಡೆದುಕೊಳ್ಳಬೇಕು. ಮುಂಬರುವ ವರ್ಷಗಳಲ್ಲಿ ಇನ್ನೂ ವಿಜ್ರಂಭಣೆಯಿಂದ ಕನ್ನಡ ಗಣಪನನ್ನು ಪ್ರತಿಷ್ಠಾಪಿಸುವ ಸಂಕಲ್ಪವಿದೆ ಎಂದು ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ನುಡಿದರು.