ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ: ಕಳೆದ ಮೇ 02ರಂದು ಪ್ರಕಟಗೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ 622
ಅಂಕಗಳಿಸಿ ರಾಜ್ಯಕ್ಕೆ 4ನೇ ರ‌್ಯಾಂಕ್ ಪಡೆದಿದ್ದ ತೀರ್ಥಹಳ್ಳಿಯ ಪ್ರಜ್ಞಾಭಾರತಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸಂಕೇತ್ ಪಿ. ಭಟ್ ಮರುಮೌಲ್ಯಮಾಪನದಲ್ಲಿ ಎರಡು ಅಂಕಗಳನ್ನು ಗಳಿಸಿ ಒಟ್ಟಾರೆ 624 ಅಂಕಗಳಿಸಿದ್ದಾನೆ.

ಈ ಮೂಲಕ ರಾಜ್ಯಕ್ಕೆ ದ್ವಿತೀಯ ರ‌್ಯಾಂಕ್ ಪಡೆದಿದ್ದಾನೆ. ಸಂಕೇತ್ ಪಿ. ಭಟ್ ಆರಗ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಮತ್ತು
ವಿಮಾಪ್ರತಿನಿಧಿ ಸುಷ್ಮಾ ದಂಪತಿಗಳ ಸುಪುತ್ರ
625ಕ್ಕೆ 624 ಅಂಕಪಡೆದು ರಾಜ್ಯಕ್ಕೆ 2ನೇ ರ‌್ಯಾಂಕ್ ಗಳಿಸಿಶಿಕ್ಷಣ ಪಡೆದ ವಿದ್ಯಾಸಂಸ್ಥೆಗೆ, ಪೋಷಕರಿಗೆ, ತಾಲೂಕಿಗೆ ಹೆಮ್ಮೆ ತಂದ ಸಂಕೇತ್ ಪಿ. ಭಟ್ ಇವನಿಗೆ ಪ್ರಜ್ಞಾಭಾರತಿ ಶಾಲೆಯ ಆಡಳಿತ ಮಂಡಳಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.