ಸುದ್ದಿ ಕನ್ನಡ ವಾರ್ತೆ
ಪಣಜಿ ಗೋವಾದ ಮಾಪ್ಸ ಶ್ರೀ ಕವಿಶೈಲ ಕನ್ನಡ ಸಂಘ ದ ವತಿಯಿಂದ ಮಾಪ್ಸ ಬಸ್ ನಿಲ್ದಾಣದ ಬಳಿ ಪ್ರತಿಷ್ಠಾಪಿಸಲಾದ ಕನ್ನಡ ಗಣಪನಿಗೆ ಪ್ರತಿದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕನ್ನಡ ಗಣಪನಿಗೆ 3ನೇ ದಿನದಂದು ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯದ್ಯಕ್ಷ ಡಾ ಸಿದ್ದಣ್ಣ ಮೇಟಿ ,ನೀಲಮ್ಮ ಮೇಟಿ ರವರು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಣಪನಿಗೆ ಪಂಚಾಮೃತ ಅಭಿಷೇಕ ಪಂಚೋಪಚಾರ ಪೂಜೆ ,ಅಷ್ಟೋತ್ತರ ಶತನಾಮಾವಳಿ ಪೂಜೆ ,ಮಹಾ ಮಂಗಳಾರತಿ ,ಮಹಾನ್ವೇದ್ಯ ಸಮರ್ಪಿಸಲಾಯಿತು.
ಭಕ್ತಾದಿಗಳು ಮಹಾಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕವಿಶೈಲ ಕನ್ನಡ ಸಂಘದ ಅಧ್ಯಕ್ಷ ಶಂಬು ಶೆಟ್ಟರ್ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಿಗರು ಭಕ್ತಾದಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
.