Banner Ad

ಸುದ್ದಿ ಕನ್ನಡ ವಾರ್ತೆ

ಚಿಕ್ಕೋಡಿ: ರಾಜ್ಯ ಸಾರಿಗೆ ಬಸ್ ಮೇಲೆ ಭಗವಾ ಧ್ವಜವನ್ನು ಕಟ್ಟಿ ಬಸ್ಸಿಗೆ ಕರಿ‌ ಮಸಿ ಬಳಿದ ಮಹಾ ಪುಂಡರು‌ ಕರ್ನಾಟಕ ಸರಕಾರ ಮತ್ತು ಕರವೇ ವಿರುದ್ದ ಘೋಷಣೆ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶನಿವಾರ ನಡೆದಿದೆ.

Banner Ad

ಶುಕ್ರವಾರ ಬೆಳಗಾವಿಯಿಂದ ಸುಳೆಭಾವಿಗೆ ಹೊರಟಿದ್ದ ನಗರ ಸಂಚಾರಿ ಬಸ್ ದಲ್ಲಿ ಮರಾಠಿ ಮಾತನಾಡದ ಬಸ್ ಕಂಡಕ್ಟರ್ ಮೇಲೆ ಕೆಲ ಪುಂಡರು ಹಲ್ಲೆ ನಡೆಸಿದ್ದರು. ಇದನ್ನು ಕನ್ನಡಪರ ಸಂಘಟನೆಗಳು ಖಂಡಿಸಿದ್ದರು. ಇದರ ವಿರುದ್ದವಾಗಿ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕರ್ನಾಟಕ ಬಸ್ ತಡೆದು ಕೆಲವರು ಪುಂಡಾಟ ನಡೆಸಿದ್ದಾರೆ. ಕೊಲ್ಹಾಪುರದಿಂದ ಕರ್ನಾಟಕಕ್ಕೆ ಆಗಮಿಸುವ ಬಸ್ ಗಳ ಸಂಚಾರ ಸ್ಥಗಿತ ಮಾಡಲಾಗಿದೆ. ಮುಂಜಾಗ್ರತವಾಗಿ ಮಹಾರಾಷ್ಟ್ರ ಬಸ್ ಗಳು ನಿಪ್ಪಾಣಿ ಡಿಪೋದಲ್ಲಿ ನಿಂತರೆ ಕರ್ನಾಟಕದ ಬಸ್ ಗಳು ಕೊಲ್ಲಾಪೂರ ಬಸ್ ನಿಲ್ದಾಣದಲ್ಲಿ ನಿಂತಿವೆ.

Banner Ad