ಸುದ್ಧಿಕನ್ನಡ ವಾರ್ತೆ
ಪಣಜಿ: ಇದ್ದಕ್ಕಿದ್ದಂತೆಯೇ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪೂರೈಕೆಯಾದ ಕಾರಣ ಮನೆಗಳಲ್ಲಿನ ರೆಫ್ರೀಜರೇಟರ್, ಟಿವಿ,ವಾಷಿಂಗ್ ಮಷಿನ್, ಫ್ಯಾನ್, ವಿಕ್ಸರ್ ಸೇರಿದಂತೆ ಹಲವು ಯಂತ್ರೋಪಕರಣಗಳು ಸುಟ್ಟುಹೋದ ಘಟನೆ ಗುರುವಾರ ಗೋವಾದ ಪರಂಪಾಯಿ-ಮಡಕಯಿಯಲ್ಲಿ ನಡೆದಿದೆ. ಇದರಿಂದಾಗಿ ಲಕ್ಷಾಂತರ ರೂ ನಷ್ಠವುಂಟಾದ ಘಟನೆ ನಡೆದಿದೆ.
ಲಭ್ಯವಾದ ಮಾಹಿತಿಯ ಅನುಸಾರ- ಗುರುವಾರ ಬೆಳಿಗ್ಗೆ 9 ಗಂಟೆಯ ಸುಮಾರು ಈ ಪ್ರದೇಶದಲ್ಲಿ ವಿದ್ಯತ್ ವೋಲ್ಟೇಜ್ ಹಠಾತ್ ಏರಿಕೆಯಾಗಿರುವುದು ಕಂಡುಬಂದಿದೆ. ಇದರಿಂದಾಗಿ ವಿವಿಧ ಯಂತ್ರೋಪಕರಣಗಳು ಮತ್ತು ಚಾರ್ಟ ಮಾಡಲು ಇಟ್ಟಿದ್ದ ಮೊಬೈಲ್ ಕೂಡ ಸುಟ್ಟುಹೋಗಿದೆ. ಇನ್ನೂ ಕೆಲವರು ಮನೆಗೆ ಬೀಗ ಹಾಕಿ ಹೊರಗೆ ಹೋಗಿದ್ದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಚಾರ್ಜ ಮಾಡಲು ಇಟ್ಟಿದ್ದ ಮೊಬೈಲ್ ಬ್ಲಾಸ್ಟ ಆಗಿದೆ. ಹಲವರ ಮನೆಗಳಲ್ಲಿ ಅಳವಡಿಸಕಾಗಿದ್ದ ಸಿಸಿಟಿವಿ ಕ್ಯಾಮರಾ, ಎಸಿ ಕೂಡ ಸುಟ್ಟುಹೋದ ಘಟನೆ ನಡೆದಿದೆ. ಇದರಿಂದಾಗಿ ಮನೆ ಮನೆಗಳಲ್ಲಿ ಲಕ್ಷಾಂತರ ರೂ ನಷ್ಠವುಂಟಾಗಿದೆ.
ಈ ಬಗ್ಗೆ ಮಾಹಿತಿ ಪಡೆದ ವಿದ್ಯತ್ ಇಲಾಖೆಯ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ತೆರಳಿ ಹಾಳಾಗಿದ್ದ ಟ್ರಾನ್ ಫಾರ್ಮರ್ ಬದಲಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.