ಸುದ್ದಿ ಕನ್ನಡ ವಾರ್ತೆ
Goa: ಗೋವಾದಿಂದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಮುಖ್ಯಮಂತ್ರಿ ದೇವ ದರ್ಶನ ಯಾತ್ರ ಯೋಜನೆಯ ಅಡಿಯಲ್ಲಿ ಗುರುವಾರ ವಿಶೇಷ ರೈಲನ್ನು ಬಿಡಲಾಯಿತು. ಗೋವಾದ ಕರಮಲಿ ರೈಲ್ವೆ ನಿಲ್ದಾಣದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರವರು ಈ ವಿಶೇಷ ರೈಲಿಗೆ ಚಾಲನೆ ನೀಡಿದರು.
ಗೋವಾದಲ್ಲಿರುವ ಜನರಿಗೆ ಮಹಾ ಕುಂಭಮೇಳ ಕ್ಕೆ ತೆರಳಲು ಗೋವಾ ಸರ್ಕಾರವು ಒಟ್ಟು ಮೂರು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿದ್ದು ಇನ್ನು ಎರಡು ರೈಲುಗಳು ಗೋವಾದಿಂದ ಮಹಾ ಕುಂಭಮೇಳಕ್ಕೆ ತೆರಳಲಿದೆ.