ಸುದ್ಧಿಕನ್ನಡ ವಾರ್ತೆ
Goa: ಅಭಿವೃದ್ಧಿಯ ಪ್ರತಿಯೊಂದೂ ಹಂತದಲ್ಲೂ ಯುವಕರನ್ನು ಪರಿಗಣಿಸಲಾಗುತ್ತದೆ. ರಾಜ್ಯದ ಹಿತ ಕಾಪಾಡುವ ಆಧುನಿಕ ಯೋಜನೆಗಳು ಬರಲಿದೆ. ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ಪ್ರಕೃತಿಯನ್ನು ರಕ್ಷಿಸಲು ನಮ್ಮ ಸರ್ಕಾರ ಕಾಳಜಿ ವಹಿಸುತ್ತದೆ. ಕೇವಲ ವಿರೋಧಕ್ಕಾಗಿ ಯೋಜನೆಗಳನ್ನು ವಿರೋಧಿಸಬೇಡಿ. ಆಯೋಜನೆಯನ್ನು ಕೂಲಂಕುಶವಾಗಿ ಅಧ್ಯಯನ ಮಾಡಿ ಅಪಾಯಕಾರಿ ಯೋಜನೆಯನ್ನು ತಪ್ಪಿಸಲು ಮತ್ತು ಜನಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಕಲಾ ಮತ್ತು ಸಂಸ್ಕøತಿ ನಿರ್ದೇಶನಾಲಯ, ಗೋವಾ ಜಾಗೋರ್ ಅಸೋಸಿಯೇಶನ್ ಸಹಯೋಗದಲ್ಲಿ ಗೋವಾದ ಪ್ರಿಯೋಳದಲ್ಲಿ ಆಯೋಜಿಸಿದ್ದ ಜಾಗೋರ್ ಮಹೋತ್ಸವದಲ್ಲಿ ಅವರು ಮಾತನಾಡುತ್ತಿದ್ದರು.

ಗೋವಾ ರಾಜ್ಯವನ್ನು ಕಲೆಯ ತವರು ಎಂದು ಕರೆಯುತ್ತಾರೆ. ಈ ಹಿನ್ನೆಲೆಯಲ್ಲಿಯೇ ರಾಜ್ಯದಲ್ಲಿ ವಿವಿಧ ರೀತಿಯ ಕಲೆ ಮತ್ತು ಸಾಂಸ್ಕøತಿಕ ಉತ್ಸವಗಳು ನಡೆಯುತ್ತಲೇ ಇರುತ್ತವೆ. ಪ್ರತಿ ತಿಂಗಳೂ ಸರ್ಕಾರಿ ಮಟ್ಟದಲ್ಲಿ ಇಂತಹ ಉತ್ಸವಗಳು ನಡೆಯುತ್ತಲೇ ಇರುತ್ತದೆ. ಇಂತಹ ಜಾಗೋರ್ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ದುಡಿಯುವ ಸಮುದಾಯದ ಈ ಸಂಭ್ರಮವನ್ನು ಉಳಿಸಿಕೊಳ್ಳೋಣ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.

ಈ ಸಂದರ್ಭದಲ್ಲಿ ಗೋವಾ ರಾಜ್ಯ ಕಲಾ ಮತ್ತು ಸಂಸ್ಕøತಿ ಖಾತೆಯ ಸಚಿವ ಗೋವಿಂದ ಗಾವಡೆ, ಜಲಸಂಪನ್ಮೂಲ ಸಚಿವ ಸುಭಾಷ ಶಿರೋಡಕರ್, ವಾಸ್ಕೊ ಶಾಸಕ ದಾಜಿ ಸಾಲಕರ್, ಮತ್ತಿತರರು ಉಪಸ್ಥಿತರಿದ್ದರು.