ಸುದ್ಧಿಕನ್ನಡ ವಾರ್ತೆ
Goa : ಗೋವಾದ ವೆರ್ಣಾ ಇಂಡಸ್ಟಿಯಲ್ ಎಸ್ಟೇಟ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ರೆನೊ ಮತ್ತು ಸ್ಕೋಡಾ ಕಾರುಗಳ ಸರ್ವಿಸ್ ಸೆಂಟರ್ ನಲ್ಲಿ ಸಂಭವಿಸಿದ ಈ ಅವಘಡದಲ್ಲಿ 30 ಕ್ಕೂ ಹೆಚ್ಚು ಕಾರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಆರಂಭದಲ್ಲಿ ಬಯಲು ಪ್ರದೇಶದಲ್ಲಿ ಒಣಹುಲ್ಲಿಗೆ ಹತ್ತಿಕೊಂಡ ಬೆಂಕಿ ಗಾಳಿಗೆ ಹರಡುತ್ತ ಮುಂದೆ ಹೋಗಿ ಕಾರಿಗಳ ಸರ್ವಿಸ್ ಸೆಂಟರ್ ಗಳ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹತ್ತಿಕೊಂಡಿದೆ. ಈ ಬೆಂಕಿ ಅಕ್ಕಪಕ್ಕದಲ್ಲಿದ್ದ ಒಂದಕ್ಕೊಂದು ಕಾರಿಗೆ ಹತ್ತಿಕೊಂಡು ದೊಡ್ಡ ಪ್ರಮಾಣದಲ್ಲಿ ಅವಘಡ ಸಂಭವಿಸಿದೆ. ಅಕ್ಕಪಕ್ಕದಲ್ಲಿಯೇ ಇದ್ದ ಈ ಎರಡೂ ಕಾರ್ ಸರ್ವಿಸ್ ಸೆಂಟರ್ ಮುಂಭಾಗದಲ್ಲಿ ನಿಲ್ಲಿಸಿದ್ದ ಬಹುತೇಕ ಎಲ್ಲ ಕಾರುಗಳು ಬೆಂಕಿಗಾಹುತಿಯಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂಧಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆಯಲ್ಲಿ ಕೋಟ್ಯಂತರ ರೂ ನಷ್ಠವಾಗಿರುವುದಾಗಿ ಅಂದಾಜಿಸಲಾಗಿದೆ.