ಸುದ್ದಿ ಕನ್ನಡ ವಾರ್ತೆ

ಶಿರಸಿ: ಅರಣ್ಯಾದಿಕಾರಿಗಳು ನಡೆಸಿದ ಕ್ಷೀಪ್ರ ಕಾರ್ಯಚರಣೆಯಲ್ಲಿ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕೇಶಿಯಾ ಜಾತಿಯ 92 ನಾಟಗಳನ್ನು ಆರೋಪಿ ಸಮೇತವಾಗಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಮಾದೇವ ರಾಮಚಂದ್ರ ವಡ್ಡಾ ಹಾಗೂ ಶಿರಸಿ ನಗರದ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ ಬಂಧಿತ ಆರೋಪಿಗಳಾಗಿದ್ದಾರೆ.

ಈ ಆರೋಪಿಗಳು ಚಂದನ್ ವುಡ್ ವರ್ಕ್ಸ್ ಮತ್ತಯ ಫರ್ನಿಚರ್ ಹತ್ತಿರ ಲಾರಿ ಮೇಲೆ ಸುಮಾರು 3 ಲಕ್ಷ ಬೆಲೆಯ ನಾಟಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ. ಉಪ ಅರಣ್ಯ ಸಂರಕ್ಷಣಾದಿಕಾರಿ ಡಾ.ಅಜ್ಜಯ್ಯ, ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಕೆ. ಎಚ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಎಸ್‌. ನಿಂಗಾಣಿ ಮಾರ್ಗದರ್ಶನದಲ್ಲಿ ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ಎಲ್‌ ನಾಯ್ಕ ಮತ್ತು ಅರಣ್ಯ ಸಂಚಾರಿ ದಳದ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಇಲಾಖೆಯ ಉಪ ವಲಯಾರಣ್ಯಾಧಿಕಾರಿ ಧನಂಜಯ ನಾಯ್ಕ, ರಾಜೇಶ‌ ಕೋಟಾರಕರ, ಶಶಿಧರ ಎಲ್.ಜಿ, ಯಶಸ್ವಿನಿ ಹಾಗೂ ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.