ಸುದ್ಧಿಕನ್ನಡ ವಾರ್ತೆ
ಪಣಜಿ: ಸಿದ್ದಿಕಿ ಅಲಿಯಾಸ್ ಸುಲೇಮಾನ್ ಖಾನ್ 2022 ರಿಂದ ನಾಪತ್ತೆಯಾಗಿದ್ದ. ಮಾಪ್ಸಾ ಪೆÇಲೀಸರು ಲೊಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದರು. ಸೆಪ್ಟೆಂಬರ್ 19, 2020 ರಂದು, ಭೂಕಬಳಿಕೆಗೆ ಸಂಬಂಧಿಸಿದಂತೆ ಮಾಪ್ಸಾ ಪೆÇಲೀಸರು ಈತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419, 465, 466, 467, 468, 471, 472 ಮತ್ತು 420 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅದೇ ಅಪರಾಧಕ್ಕೆ ಸಂಬಂಧಿಸಿದಂತೆ ಅವರನ್ನು ನವೆಂಬರ್ 12, 2024 ರಂದು ಬಂಧಿಸಲಾಯಿತು.
ಭೂಕಬಳಿಕೆ ಪ್ರಕರಣದಲ್ಲಿ ಬಂಧನದಲ್ಲಿರುವಾಗಲೇ ಪೆÇಲೀಸರ ನೆರವಿನಿಂದ ಪರಾರಿಯಾಗಿದ್ದ ಸಿದ್ದಿಕಿ ಸುಲೇಮಾನ್ ಖಾನ್ ವಿರುದ್ಧ 15 ಅಪರಾಧ ಪ್ರಕರಣಗಳು ದಾಖಲಾಗಿವೆ. ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ 35 ಮಹಿಳೆಯರ ಸಹಾಯವನ್ನೂ ಪಡೆದಿದ್ದ ಎನ್ನಲಾಗಿದೆ.
ಗೋವಾದಲ್ಲಿ 7, ದೆಹಲಿಯಲ್ಲಿ 1, ಹೈದರಾಬಾದ್‍ನಲ್ಲಿ 4 ಮತ್ತು ಪುಣೆಯಲ್ಲಿ 3 ಪ್ರಕರಣಗಳು ದಾಖಲಾಗಿವೆ. ಮಾಪ್ಸಾ, ಬೆಳಗಾವಿ ಮುಂತಾದ ವಿವಿಧೆಡೆ ಭೂಮಿ ಖರೀದಿ ಮತ್ತು ಮಾರಾಟ ವಹಿವಾಟಿನಲ್ಲಿ ಜನರನ್ನು ವಂಚಿಸಿದ್ದಾನೆ. ಭೂಕಬಳಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಗೋವಾದ ಏಕತಾನಗರ ಮಾಪ್ಸಾದಲ್ಲಿ 1, ಗವ್ಲಿಮಲ್ ತಿಸ್ವಾಡಿಯಲ್ಲಿ 3 ಮತ್ತು ಥಿವಿಯಲ್ಲಿ 2 ಒಟ್ಟು 6 ಆಸ್ತಿಗಳನ್ನು ಕಬಳಿಸಿದ್ದಾರೆ. ಈತನ ವಿರುದ್ಧ ಹಣಜುನ್‍ನಲ್ಲಿ ಕೊಲೆ ಮತ್ತು ಮಾಪ್ಸಾದಲ್ಲಿ ಕೊಲೆ ಯತ್ನ ಪ್ರಕರಣಗಳು ಭೂಕಬಳಿಕೆ ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಕರಣ ದಾಖಲಾಗಿದ್ದು, ಗೋವಾ ಪೆÇಲೀಸರು ತಿಂಗಳ ಹಿಂದೆ ಕರ್ನಾಟಕದಿಂದ ಬಂಧಿಸಿ ಗೋವಾಕ್ಕೆ ಕರೆತಂದಾಗ ವೀಡಿಯೋದಲ್ಲಿ ಸುಲೈಮಾನ್ ಹೇಳಿದಂತೆ ಗೋವಾ ಪೆÇಲೀಸರು ಹುಬ್ಬಳ್ಳಿಗೆ ಕರೆದೊಯ್ದು ಹುಬ್ಬಳ್ಳಿಯಲ್ಲಿ ಬಿಡುಗಡೆ ಮಾಡಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ.
ಸುಲೇಮಾನ್ ಅವರ ಜಾಮೀನು ಅರ್ಜಿಯನ್ನು ನಿರ್ವಹಿಸಿದ ವಕೀಲ ಅಮಿತ್ ಪಾಲೇಕರ್ ಅವರ ಸಹಾಯದಿಂದ ಸುನೀಲ್ ಕವ್ಠಂಕರ್ ಅವರು ಸಿದ್ದಿಕಿ ಸುಲೇಮಾನ್ ಅವರ ಕೆಲವು ವೀಡಿಯೊಗಳನ್ನು ಭಾನುವಾರ ಬಿಡುಗಡೆ ಮಾಡಿದರು. ಅದರಲ್ಲಿ ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸುಲೇಮಾನ್ ಕೋರಿದ್ದಾರೆ. ಇದಲ್ಲದೆ, ಕೆಲವು ಪೆÇಲೀಸ್ ಅಧಿಕಾರಿಗಳ ಮೇಲೂ ಆರೋಪವಿದೆ. ಈ ಕುರಿತು ಮಾತನಾಡಿದ ಪೆÇಲೀಸ್ ಮಹಾನಿರ್ದೇಶಕರು, ಸುಲೈಮಾನ್ ಸಿಕ್ಕ ಬಳಿಕವಷ್ಟೇ ಅವರು ಮಾಡಿರುವ ಆರೋಪಗಳ ಬಗ್ಗೆ ವಿಚಾರಣೆ ನಡೆಸಬಹುದು ಎಂದಿದ್ದಾರೆ.
ಸಿದ್ದಿಕಿ ಸುಲೇಮಾನ್ ಏಳು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ಈ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಮೊತ್ತ ಇರಲಿಲ್ಲ. ಬಂಧನದ ವೇಳೆ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯನ್ನು ಬಳಸುತ್ತಿದ್ದರು. ಈ ಬ್ಯಾಂಕ್ ಖಾತೆಯಲ್ಲಿ 1.36 ಕೋಟಿ ರೂ. ಇತ್ತು. ಈ ಖಾತೆಯನ್ನು ಪೆÇಲೀಸರು ಸ್ಥಗಿತಗೊಳಿಸಿದ್ದರು.ಅಲ್ಲದೆ 2018 ರಲ್ಲಿ, ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಂಡ ಪ್ರಕರಣದಲ್ಲಿ ಪೆÇಲೀಸರು ಸಿದ್ದಿಕಿಯನ್ನು ಬಂಧಿಸಿದ್ದರು.
ಏಕತಾನಗರದಲ್ಲಿ 20.819 ಸಾವಿರ ಚದರ ಮೀಟರ್ ಭೂಮಿ – ಮಾಪ್ಸಾ ನಕಲಿ ರಬ್ಬರ್ ಸ್ಟ್ಯಾಂಪ್‍ಗಳನ್ನು ಬಳಸಿ ನಕಲಿ ದಾಖಲೆಗಳನ್ನು ಕಾನೂನುಬದ್ಧವೆಂದು ಬಿಂಬಿಸಿ ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಇದು ಏಪ್ರಿಲ್ 2020 ರ ಮೊದಲು ಸಂಭವಿಸಿದೆ.