ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ತಾಲೂಕಿನಲ್ಲಿ ಅಕಾಲಿಕವಾದ ಮಳೆ ಶುಕ್ರವಾರ ಸಂಜೆಯೂ ಆರ್ಭಟಿಸಿದೆ.ಎರಡು ಮೂರ ದಿನದಿಂದ ಮಳೆಗೆ ಕೊಯ್ದ ಭತ್ತದ ಫಸಲು ಸಂಪೂರ್ಣ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ.

ಶುಕ್ರವಾರ ಸಂಜೆ ವೇಳೆ ಬಾರೀಗುಡುಸಹಿತ ಮಳೆ ತಾಲೂಕಿನಲ್ಲಿ ಆಗಿದೆ. ಬೇಳಗೇರಿ ಗ್ರಾಮದ ಸುಚಿತ್ರಾ ಮಂಜುನಾಥ ಮರಾಠಿ (೨೬) ಮತ್ತು ಉದಯ ನೀಲಕಂಠ ಮರಾಠಿ (೩೬) ಇವರಿಗೆ ಸಿಡಿಲು ಬಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೇ ಊರಿನ ನೀಲಕಂಠ ಮರಾಠಿ ಇವರ ಆಕಳು ಸಿಡಿಲು ಬಡಿದು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.