ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಕ್ಯಾಶ್ ಫಾರ್ ಜೋಬ್ ಅಕ್ರಮದಿಂದಾಗಿ ಕಂಗಾಲಾಗುವಂತೆ ಮಾಡಿದೆ. ಗೋವಾದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳದಿಂದಾಗಿ ಇಂತಹ ಅಕ್ರಮದ ಮೂಲಕ ಜನರನ್ನು ಮೋಸವೆಸಗಲಾಗುತ್ತಿದೆ. ಇದನ್ನು ಆಮ್ ಆದ್ಮಿ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಪಕ್ಷದ ಕೇಂದ್ರ ನಾಯಕ ಸಂಜಯ್ ಸಿಂಗ್ ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗೋವಾದಲ್ಲಿ ಸರ್ಕಾರಿ ನೌಕರಿ ಭರ್ತಿ ಪ್ರಕ್ರಿಯೆಯಲ್ಲಿ ಅಕ್ರಮ ವು ಗೋವಾದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ಆರಂಭಗೊಂಡಿದೆ. 2018 ರಲ್ಲಿಯೂ ಇದೇ ಅಕ್ರಮ ಬೆಳಕಿಗೆ ಬಂದಿತ್ತು, ಅಂದು ಮಂತ್ರಿಮಂಡಳದಿಂದ ಸಚಿವರೋರ್ವರನ್ನು ಕೈಬಿಡಲಾಗಿತ್ತು. ಕಳೆದ ವಿಧಾನಸಭಾ ಚುನಾಚಣೆಯಲ್ಲಿ ಕೂಡ ಅವರಿಗೆ ಬಿಜೆಪಿ ಟಿಕೇಟ್ ನೀಡಿರಲಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಸಂಜಯ್ ಸಿಂಗ್ ಮಾಹಿತಿ ನೀಡಿದರು.

ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಮಾಜಿ ಸಚಿವರಿಗೆ ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಅಂದಿನ ಗೋವಾ ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ರವರು ಗೋವಾ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಠಾಚಾರದ ಆರೋಪ ಮಾಡಿದ್ದರು ಎಂದು ಸಂಜಯ್ ಸಿಂಗ್ ನುಡಿದರು.