ಸುದ್ದಿ ಕನ್ನಡ ವಾರ್ತೆ
ಕುಮಟಾ: ತಾಲೂಕಿನ ಅರಣ್ಯ ಕತಗಾಲ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಹಂದಿಯನ್ನ ಬೇಟೆ ಆಡಿದ ಮೂವರನ್ನು ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿರುವ ಘಟನೆ ಬುಧವಾರ ನಡೆದಿದೆ.
ಎಡತಾರೆ ಗ್ರಾಮದ ಗುರುಪ್ರಸಾದ ಗೌಡ, ಜಯಂತ ಶಂಕರ ಗೌಡ ಹಾಗೂ ಅಳಕೋಡ ಗ್ರಾಮದ ಸುಬ್ಬಾ ಗೋವಿಂದ ನಾಯ್ಕ ಎಂಬುವವರು ಕಾಡು ಹಂದಿಯನ್ನು ಬೇಟೆಯಾಡಿ ಬಂಧಿತರಾದ ಆರೋಪಿಗಳಾಗಿದ್ದಾರೆ.ಬಂಧಿತರಿಂದ 45 ಕೆಜಿ ಕಾಡು ಹಂದಿ ಮಾಂಸ, ನಾಡ ಬಂದೂಕಿನ ಗುಂಡುಗಳು, ಕಡವೆ ಕೊಂಬುಗಳು, 3 ಬೈಕ್, ಮೊಬೈಲ್ ಸೇರಿ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹೊನ್ನಾವರ ಡಿಎಫ್ಒ ಯೋಗೀಶ ಸಿ.ಕೆ., ಕುಮಟಾ ಎಸಿಎಫ್ ಕೃಷ್ಣ ಗೌಡ ಮಾರ್ಗದರ್ಶನದಲ್ಲಿ ಕತಗಾಲ ಆರ್ಎಫ್ಒ ಪ್ರೀತಿ ನಾಯ್ಕ,ಡಿಆರ್ಎಫ್ಒ ಹೂವಣ್ಣ ಗೌಡ, ಹರೀಶ್ಚಂದ್ರ ಪಟಗಾರ ಹಾಗೂ ಗಸ್ತು ಅರಣ್ಯ ಪಾಲಕರಾದ ಮಹೇಶ ಹವಳೆಮ್ಮನವರ್, ಸದಾಶಿವ ಪುರಾಣಿಕ್, ಭರತ್ ಕುಮಾರ್ ಬಿ, ಮಾಳಪ್ಪ ಮಾಕೊಂಡ, ತಾರಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.