ಸುದ್ದಿ ಕನ್ನಡ
ಜೋಯಿಡಾ ತಾಲೂಕಿನ ಉಳವಿ ಪಂಚಾಯತದ ದಟ್ಟಾರಣ್ಯದಲ್ಲಿರುವ ಕುಗ್ರಾಮ ಶಿವಪುರಕ್ಕೆ ಗುರುವಾರ ಮಧ್ಯಾಹ್ನ 3 ಗಂಟೆಗೆ ಜೋಯಿಡಾದಲ್ಲಿರುವ ಸಿಡಿಪಿಓ ರವರು ತಮ್ಮ ಸಿಬ್ಬಂದಿಯೊಂದಿಗೆ ದಿಡೀರ್ ಬೆಟ್ಟಿ ನೀಡಿದರು.
ಅಂಗನವಾಡಿಯ ದುಸ್ಥಿತಿ ಕಂಡು ತತ್ ಕ್ಷಣವೇ ಕೈಗದವರನ್ನು ಮತ್ತೊಮ್ಮೆ ಸಂಪರ್ಕಿಸಿ ಕಟ್ಟಡದ ಬಗ್ಗೆ ಪತ್ರ ಬರೆಯುವುದಾಗಿ ತಿಳಿಸಿರುತ್ತಾರೆ.
ಅತ್ಯಂತ ಮಹತ್ವದ ಜೀವನದ ಉದ್ದೇಶಗಳು ಅಂಗನವಾಡಿ ಕೇಂದ್ರಗಳಲ್ಲಿ ಸಾಕಾರಗೊಳ್ಳುತ್ತದಾದ್ದರಿಂದ ಒಬ್ಬನೇ ಫಲಾನುಭವಿಗಳಿದ್ದರೂ ಸಹ ಸರ್ಕಾರದ ಈ ಸೌಲಭ್ಯ ದೊರಕಲೇಬೇಕು. ಹೀಗಿದ್ದು ಇಲ್ಲಿ ಹತ್ತು ಜನ ಮಕ್ಕಳಿದ್ದಾರೆಂದರೆ ಸರ್ಕಾರದ ಯೋಜನೆಗಳೆಲ್ಲ ತಲುಪಲೇ ಬೇಕು ಅಂತ ಅಭಿಪ್ರಾಯ ಪಡುತ್ತಾ ಮುಂದಿನ ಶಿಕ್ಷಣಕ್ಕೆ ಎಲ್ಲಿ ಅಂತ ಕೇಳಿ ಕಾಳಜಿ ವ್ಯಕ್ತಪಡಿಸಿದರು.
ಅದೇ ಸಂದರ್ಭದಲ್ಲಿ ಶಿವಪುರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ವಿಶ್ವನಾಥ್ ಸಿದ್ದಿ ರವರು -ಅಂಗನವಾಡಿಯಲ್ಲಿ ಮಕ್ಕಳು ತಯಾರಾದರೆ ಅದೇ ನಮ್ಮ ಶಾಲೆಯ ಮುಂದಿನ ಏಳಿಗೆಗೆ ಕಾರಣ ಅಂತ ಅಂಗನವಾಡಿಯ ಮಹತ್ವವನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಊರ ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು. ಅವರಿಗೆ ಬರುವುದಕ್ಕೆ ವಾಹನ ವ್ಯವಸ್ಥೆ ಕಲ್ಪಿಸಿದ ಪಿಡಬ್ಲ್ಯೂಡಿ ಇಲಾಖೆಗೆ ಧನ್ಯವಾದ ಸಲ್ಲಿಸಲಾಯಿತು.
ವರದಿ: ಗೋಪಾಲ್ ಭಟ್ ಶಿವಪುರ
