ಸುದ್ದಿ ಕನ್ನಡ ವಾರ್ತೆ

ನಿಗದಿತವಾದ ಸಮಯದಲ್ಲಿ ಕೇಂದ್ರ ಸರಕಾರದ ಮಹತ್ವಕಾಂಕ್ಷಿ ಯೋಜನೆಯದ ಹವಾಮಾನ ಆಧಾರಿತ ಬೆಳೆ ವಿಮೆ ಹಣವನ್ನು ಈ ವರ್ಷ ನವೆಂಬರ್ ತಿಂಗಳಲ್ಲಿಯೇ ಜಮಾ ಮಾಡಿರುವುದು ಸ್ವಾಗತಾರ್ಹ .ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ಹೇಳಿದ್ದಾರೆ.

ಬೆಳೆವಿಮೆ ಕುರಿತು ಪ್ರಕಟಿಸಿರುವ ಭಟ್ ಅವರು,
ಕಳೆದ ಎರಡು ವರ್ಷ ಸಂಸದರಾದ ವಿಶ್ವೇಶ್ವರ್ ಹೆಗಡೆ ಕಾಗೇರಿಯವರ ಅವಿರತ ಶ್ರಮದಿಂದ ರೈತರಿಗೆ ಬೆಳೆ ವಿಮೆ ದೊರಕುವಂತಾಗಿತ್ತು. ಆದರೆ ಈ ವರ್ಷ ಅನಪೇಕ್ಷಿತ ವಿಳಂಬವನ್ನು ತಪ್ಪಿಸಿ ವಿಮಾ ಪರಿಹಾರ ಮೊತ್ತವನ್ನು ರೈತರ ಖಾತೆಗಳಿಗೆ ಜಮಾ ಮಾಡಿಸಿರುವುದಕ್ಕೆ ಸಂಸದರಿಗೆ, ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಮತ್ತು ವಿಮಾ ಕಂಪನಿಗೆ ಬಿಜೆಪಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಎಂದು ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದಲೂ ಕೂಡ ಮಳೆ ಮಾಪನ ಯಂತ್ರಗಳನ್ನು ಮತ್ತು ಸ್ವಯಂ ಚಾಲಿತ ಹವಾಮಾನ ಯಂತ್ರಗಳ ಸುಸ್ಥಿತಿಯಲ್ಲಿಡದ ಕಾರಣ ಬೆಳೆ ವಿಮೆ ಪರಿಹಾರ ನಿರ್ಧರಿಸುವಲ್ಲಿ ರೈತರಿಗೆ ತೀರ ತಾರತಮ್ಯವಾಗಿದ್ದು ನ್ಯಾಯಯುತವಾದ ವಿಮಾ ಪರಿಹಾರ ದೊರಕಿರುವುದಿಲ್ಲ. ಕೇವಲ ಅಲ್ಲಲ್ಲಿ ಸರಿ ಇರುವ ಯಂತ್ರಗಳನ್ನು ಆಧರಿಸಿ ಅಂದಾಜಿನ ಮೇಲೆ ಅಂಕಿ ಅಂಶಗಳನ್ನು ಪರಿಗಣಿಸಿ ವಿಮಾ ಪರಿಹಾರವನ್ನು ನಿರ್ದಿಷ್ಟ ಮಾಡಿರುವುದು ರೈತರಿಗೆ ತೀರಾ ಅನ್ಯಾಯ ಉಂಟಾಗಿದೆ. ರಾಜ್ಯ ಸರ್ಕಾರದ ದಿವ್ಯ ನಿರ್ಲಕ್ಷ ಮತ್ತು ಕೆ ಎಸ್ ಎನ್ ಎಂ ಡಿ ಸಿ ಇದರಿಂದ ನಿರ್ದಿಷ್ಟವಾದ ಹವಾಮಾನ ಮತ್ತು ಮಳೆಯ ದಾಖಲೀಕರಣ ಆಗದೇ ಇರುವುದರಿಂದ ರೈತರಿಗೆ ಹಕ್ಕಿನಂತೆ ಬರಬೇಕಾದ ವಿಮಾ ಪರಿಹಾರದಲ್ಲಿ ಅನ್ಯಾಯವಾಗಿದೆ. ಈ ಕುರಿತಾಗಿ ರೈತರ ಪರವಾಗಿ ಬಿಜೆಪಿ ಸಾಕಷ್ಟು ಹೋರಾಟವನ್ನು ಕೈಗೊಂಡು ಈ ಅಂಕಿ ಅಂಶಗಳ ಸಂಗ್ರಹಣೆಗೆ ಅಗತ್ಯವಾದ ವ್ಯವಸ್ಥೆಯನ್ನು ಸರಿಪಡಿಸಲು ಹೇಳಿದ್ದರು ಸಹ ರಾಜ್ಯ ಕಾಂಗ್ರೆಸ್ ಸರ್ಕಾರ ಯಾವತ್ತಿನಂತೆ ನಿರ್ಲಕ್ಷ ವಹಿಸಿದೆ. ಇದು ಕಾಂಗ್ರೆಸ್ ಸರ್ಕಾರ ಜನತೆಗೆ ರೈತರಿಗೆ ಮಾಡಿದ ದ್ರೋಹವಾಗಿರುತ್ತದೆ .ಒಂದು ಎಕರೆ ಅಡಿಕೆ ತೋಟಕ್ಕೆ ಸುಮಾರು 53 ಸಾವಿರ ರೂಪಾಯಿಗಳ ವಿಮೆಯನ್ನು ಮಾಡಿ, ರೈತನ ಪಾಲಿನ ವಿಮಾ ಕಂತಾದ ರೂ. 2590 ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲಿನ ವಿಮಾ ಕಂತು ತಲಾ 5892 ಸೇರಿಸಿ ಒಂದು ಎಕರೆಗೆ 14,375 ಗಳ ಪ್ರೇಮಿಯ0ನ್ನು ಇನ್ಸೂರೆನ್ಸ್ ಕಂಪನಿಗಳು ಪಡೆದುಕೊಂಡಿವೆ. ಆದರೆ ವಿಮಾ ಪರಿಹಾರ ನೀಡುವ ಸಂದರ್ಭದಲ್ಲಿ ಅತಿ ಕಡಿಮೆ ಪರಿಹಾರ ನೀಡಿದ್ದು ಜೊತೆಗೆ ಅಕ್ಕಪಕ್ಕದಲ್ಲಿರುವ ಗ್ರಾಮ ಪಂಚಾಯಿತಿಗಳ ರೈತರಿಗೆ ಅಗಾಧ ವ್ಯತ್ಯಾಸ ಹೊಂದಿದ ವಿಮಾ ಪರಿಹಾರ ನೀಡಿರುವುದು ಕಂಡುಬರುತ್ತದೆ. ಎಲ್ಲಾಪುರದ ಕಂಪ್ಲಿ ಪಂಚಾಯತಕ್ಕೆ ಹೆಕ್ಟೇರಿಗೆ 5,971 ನೀಡಿದರೆ, ಮಾವಿನ ಮನೆಗೆ 75,400 ಪರಿಹಾರ ನೀಡಿದೆ. ಶಿರಸಿಯಲ್ಲಿ ಮೊದಲು ಒಂದೇ ಗ್ರಾಮ್ ಪಂಚಾಯ್ತಿಗಳಾಗಿದ್ದ ಬೈರು0ಬೆ ಯಲ್ಲಿ ಗುಂಟೆಗೆ 162 ರೂಪಾಯಿ ನೀಡಿದ್ದರೆ ಸದಾಶಿವಳ್ಳಿಗೆ 442 ರೂಪಾಯಿ ನೀಡಿದೆ. ಈ ರೀತಿಯಲ್ಲಿ ಕೇವಲ ಅಂದಾಜಿನ ಮೇಲೆ ಅಂಕಿ ಅಂಶಗಳನ್ನು ಬಳಸಿ ಎರಡು ಮೂರು ಕಿಲೋಮೀಟರ್ ಅಂತರದಲ್ಲಿರುವ ಪಂಚಾಯತಗಳಿಗೆ ಯಾವುದೇ ಮಾನದಂಡವಿಲ್ಲದೆ ಕೇವಲ ಅಂದಾಜಿನಂತೆ ವಿಮಾ ಪರಿಹಾರ ನೀಡಿರುವುದು ರೈತರಿಗೆ ಮಾಡಿದ ದೊಡ್ಡ ಮೋಸವಾಗಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ವಿಮಾಕಂತಿನಷ್ಟು ಹಣವನ್ನು ಕೂಡ ರೈತರಿಗೆ ನೀಡದಿರುವುದಕ್ಕೆ ಯಾವ ಕಾಣದ ಕೈಗಳ ಕುತಂತ್ರ ಕೆಲಸ ಮಾಡಿದೆ?
ಈಗಾಗಲೇ ಯಂತ್ರಗಳ ದುರಸ್ತಿಗೆ ಟೆಂಡರ್ ಮಾಡಿದ್ದೇವೆ ಎನ್ನುವ ರಾಜ್ಯ ಸರ್ಕಾರ ಈ ಕುರಿತು ತಕ್ಷಣದಲ್ಲಿ ಸ್ಪಂದಿಸಿ ರೈತರಿಗೆ ಈ ಬಾರಿ ಆಗಿರುವಂತಹ ಅನ್ಯಾಯವನ್ನು ತಕ್ಷಣ ಗಮನಕ್ಕೆ ತೆಗೆದುಕೊಂಡು ಕಂದಾಯ ಇಲಾಖೆಯಲ್ಲಿರುವ ಮಳೆಮಾಪನ, ಹವಾಮಾನದ ಅಂಕಿ-ಅಂಶಗಳನ್ನು ಪಡೆದುಕೊಂಡು ವಿಮಾ ಪರಿಹಾರದಲ್ಲಿ ಆಗಿರುವ ಅನ್ಯಾಯವನ್ನು ತಕ್ಷಣದಲ್ಲಿ ಸರಿಪಡಿಸಿ , ರೈತರಿಗೆ ನ್ಯಾಯಯುತವಾಗಿ ದೊರೆಯಬೇಕಾದ ವಿಮಾ ಪರಿಹಾರ ಮೊತ್ತವನ್ನ ಕೊಡಿಸಲು ಪುನರ್ಪರಿಶೀಲನೆ ರೈತರಿಗೆ ನ್ಯಾಯವನ್ನು ಕೊಡಿಸಬೇಕು.

ಸ್ಥಳೀಯವಾಗಿ ಯಂತ್ರಗಳ ನಿರ್ವಹಣೆಯನ್ನು ವಿ ಎ ಗಳಿಗೆ ವಹಿಸಿದ್ದು ಅವರಿಗೆ ಅಂಕಿ ಅಂಶಗಳು ಸರಿಯಾಗಿ ದಾಖಲಾಗುತ್ತಿವೆಯೋ ಇಲ್ಲವೋ ಎಂಬುದರ ಬಗ್ಗೆ ಗಮನಿಸಲು ಅಗತ್ಯವಾದ ತರಬೇತಿಯನ್ನು ನೀಡಬೇಕು.
ತಕ್ಷಣದಲ್ಲಿ ಮಳೆ ಮಾಪನ ಮತ್ತು ಎಟಿಎಸ್ ಯಂತ್ರಗಳನ್ನು ಸರಿಪಡಿಸಿ ನಿರ್ವಹಿಸದಿದ್ದಲ್ಲಿ ಮುಂದೆಯೂ ಸಹ ಇದೆ ಅನ್ಯಾಯ ಮುಂದುವರೆಯಲಿದೆ.ರಾಜ್ಯ ಸರಕಾರ ತನ್ನ ಕರ್ತವ್ಯದಿಂದ ವಿಮುಖವಾಗದೆ, ತನ್ನ ನಿರ್ಲಕ್ಷದಿಂದ ರೈತರಿಗೆ ಅನ್ಯಾಯವಾಗದಂತೆ ತಕ್ಷಣ ಕಾರ್ಯ ಪ್ರವೃತ್ತವಾಗಿ ಎಚ್ಚರಿಕೆ ವಹಿಸಲಿ.
ಎಂದು ಸದಾನಂದ ಭಟ್ ನಿಡುಗೋಡ್
ಬಿಜೆಪಿ ಜಿಲ್ಲಾ ವಕ್ತಾರ ಅವರು ಪ್ರಕಟಣೆ ಯಲ್ಲಿ ಹೇಳಿದ್ದಾರೆ.